Sunday, January 26, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ‘ ಸುನಾದ’ದ ಶಾಖೆ ಶುಭಾರಂಭ – ಕಹಳೆ ನ್ಯೂಸ್

ಉಪ್ಪಿನಂಗಡಿ : ಸಂಗೀತ ಕ್ಷೇತ್ರದಲ್ಲಿ ಶಾಸ್ತ್ರೀಯ ಸಂಗೀತ ಎಂಬುದು ರಾಜಮಾರ್ಗವಿದ್ದಂತೆ.ಶಾಸ್ತ್ರೀಯ ಸಂಗೀತವನ್ನು ಕರತಲಾಮಲಕ ಮಾಡಿಕೊಂಡವನಿಗೆ ಸಂಗೀತದ ಬೇರೆ ಪ್ರಕಾರಗಳನ್ನು ಕಲಿಯುವುದು ಅತ್ಯಂತ ಸುಲಭ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ತಿಳಿ ಹೇಳಿ ಮಕ್ಕಳನ್ನು ಇಂತಹ ವಿದ್ಯೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡುವುದು ಪಾಲಕರ ಆದ್ಯ ಕರ್ತವ್ಯ ಎಂದು ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಸುನಾದ ಸಂಗೀತ ಕಲಾ ಶಾಲೆಯ ಉಪ್ಪಿನಂಗಡಿ ಶಾಖೆಯನ್ನು ದೀಪ ಬೆಳಗಿ ಉದ್ಘಾಟಿಸುತ್ತಾ ಮಾತನಾಡಿದರು.ಇದರಿಂದ ಉಪ್ಪಿನಂಗಡಿ ಪರಿಸರದ ಸಂಗೀತಾಸಕ್ತರ ಬಹುದಿನಗಳ ಆಶಯವು ಕೈಗೂಡಿದಂತಾಗಿದೆ.ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಉದ್ಘಾಟನೆಗೊಂಡ ಸಂಗೀತ ಶಾಲೆಯನ್ನು ಸಂಗೀತ ಶಿಕ್ಷಕಿ ವಿದುಷಿ ಶಿಲ್ಪಾ ಸಿ ಯಚ್ ಅವರು ನಡೆಸಿಕೊಂಡು ಬರಲಿದ್ದಾರೆ.ಉದ್ಘಾಟನಾ ಸಮಾರಂಭದಲ್ಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು,ಶ್ರೀಮತಿ ವಿದ್ಯಾ ಸರಸ್ವತಿ,ಶ್ರೀ ಎಂ ವೇಣುಗೋಪಾಲ್ ಪುತ್ತೂರು ಉಪಸ್ಥಿತರಿದ್ದರು.ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು