Recent Posts

Monday, January 27, 2025
ಪುತ್ತೂರು

ವಿದ್ಯಾರ್ಥಿಗಳಿಗೆ ತಂತ್ರಜ್ಞಾನಗಳ ಬಗ್ಗೆ ಅರಿವು ಇರಬೇಕು; ಲಕ್ಷ್ಮೀ ವಿ. ಭಟ್-ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳು ಆಗದೆ, ಇತರ ತಂತ್ರಜ್ಞಾನಗಳನ್ನು ಅಧ್ಯಯನ ಮಾಡುತ್ತಿರಬೇಕು. ಇದರಿಂದ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗುತ್ತದೆ. ಅಲ್ಲದೆ ಅದಕ್ಕೆ ಪೂರಕವಾದ ಯೋಜನೆಗಳನ್ನು ತಯಾರಿಸಿ, ಕಾರ್ಯರೂಪಕ್ಕೆ ತರುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಿ. ಭಟ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ವ್ಯವಹಾರ ಆಡಳಿತ ಇಲಾಖೆ ಮತ್ತು ಐಕ್ಯುಎಸಿ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ ‘ಬೃಹತ್ ಮುಕ್ತ ಆನ್ಲೈನ್ ಕೋರ್ಸ್’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸೋಮವಾರ ಅವರು ಮಾತನಾಡಿದರು. ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಇದರಿಂದ ನಮ್ಮಲ್ಲಿರುವ ಜ್ಞಾನವು ವೃದ್ಧಿಸುತ್ತದೆ. ಅಲ್ಲದೆ ಇಂಗ್ಲಿಷ್ ಮಾತನಾಡುವ ಕಲೆ ವಿದ್ಯಾರ್ಥಿಗಳಲ್ಲಿ ಇರಬೇಕು. ಇದರಿಂದ ಸರಳವಾಗಿ ತಂತ್ರಜ್ಞಾನದ ಬಗ್ಗೆ ಅಥವಾ ಯೋಜನೆಯ ಬಗ್ಗೆ ತಿಳಿ ಹೇಳಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವ್ಯವಹಾರ ಆಡಳಿತ ಇಲಾಖೆಯ ಮುಖ್ಯಸ್ಥೆ ರೇಖಾ.ಪಿ ಮಾತನಾಡಿ, ಕಂಪೆನಿಗಳಲ್ಲಿ ಮಾರ್ಕೆಟಿಂಗ್ ಮೌಲ್ಯಗಳು ಪುನರಾರಂಭಗೊಳ್ಳುವ ಅಗತ್ಯವಿದೆ. ಇದರಿಂದ ಹಲವು ರೀತಿಯ ತಂತ್ರಜ್ಞಾನಗಳು ಜಾರಿಗೊಳ್ಳುತ್ತದೆ. ಆದ್ದರಿಂದ ಆನ್ಲೈನ್ ಮುಕ್ತ ಕೋರ್ಸ್ ಗಳು ಮುಂದುವರೆಸಬೇಕು ಎಂದು ನುಡಿದರು. ತೃತೀಯ ಬಿ.ಬಿ.ಎ. ವಿದ್ಯಾರ್ಥಿ ಪ್ರಜ್ವಲ್ ಪಿ.ಎಸ್. ಸ್ವಾಗತಿಸಿ, ದೀಕ್ಷಿತ್ ವಂದಿಸಿದರು. ಅಭಿಷೇಕ್ ಆಳ್ವ ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು