Sunday, January 26, 2025
ಹೆಚ್ಚಿನ ಸುದ್ದಿ

ಹಿಂದೂ ರಾಷ್ಟ್ರದ ಧ್ವನಿಯನ್ನು ಮೊಳಗಿಸಲು ಆನ್‍ಲೈನ್ ಹಿಂದೂ ರಾಷ್ಟ್ರ-ಜಾಗೃತಿ ಸಭೆ !-ಕಹಳೆ ನ್ಯೂಸ್

ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಗಲಿರುಳು ಕಾರ್ಯ ಮಾಡುತ್ತಿದೆ. ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆ ಮತ್ತು ಹಿಂದೂ ಸಂಘಟನೆ ಇವು ಸಮಿತಿಯ ಕಾರ್ಯದ ಪಂಚಸೂತ್ರಗಳಾಗಿವೆ. ಇದಕ್ಕಾಗಿ ಸಮಿತಿಯ ವತಿಯಿಂದ ಅಧಿವೇಶನ, ಧರ್ಮಶಿಕ್ಷಣವರ್ಗ, ವ್ಯಾಖ್ಯಾನಗಳು, ಆಂದೋಲನಗಳು, ಸಭೆ ಇತ್ಯಾದಿ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಸಮಿತಿಯ ಉಪಕ್ರಮಗಳ ಹಿಂದಿನ ಮೈಲುಗಲ್ಲು ಎಂದು ಹೇಳಬಹುದು. ಸಮಿತಿಯ ವತಿಯಿಂದ ದೇಶದಾದ್ಯಂತ ಇಷ್ಟರವರೆಗೆ 1896 ಸಭೆಗಳನ್ನು ಆಯೋಜಿಸಲಾಗಿದ್ದು ಅದರ ಮೂಲಕ ಧರ್ಮಾಚರಣಿ ಹಿಂದೂಗಳ ಕೃತಿಶೀಲ ಸಂಘಟನೆಗಳು ನಿರ್ಮಾಣವಾಗುತ್ತಿವೆ. ಈ ಸಭೆಯ ಮೂಲಕ ಮೊತ್ತಮೊದಲು ನೀಡಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಯ ಘೋಷಣೆಯು ಈಗ ದೇಶವ್ಯಾಪಿಯಾಗಿದೆ. ಈ ಘೋಷಣೆಯನ್ನು ನೆರವೇರಿಸಲು ಸಮಿತಿಯ ವತಿಯಿಂದ ‘ಆನ್‍ಲೈನ್ ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯನ್ನು ಆಯೋಜಿಸಲಾಗಿದೆ. ಕೊರೋನಾದಿಂದಾಗಿ ಉದ್ಭವಿಸಿದ ಪ್ರತಿಕೂಲ ಪರಿಸ್ಥಿತಿಗೆ ಸಮಿತಿಯ ಧರ್ಮಪ್ರಚಾರದ ಕಾರ್ಯಕ್ಕೆ ಅಡ್ಡಿಪಡಿಸಲು ಸಾಧ್ಯವಾಗಲಿಲ್ಲ. ತದ್ವಿರುದ್ಧ ಸಮಿತಿಯು ಈ ಕಾಲದಲ್ಲಿ ಸೋಶಿಯಲ್ ಮಿಡಿಯಾದ ಮೂಲಕ ಧರ್ಮಪ್ರಚಾರದ ಕಾರ್ಯವನ್ನು ನಿರಂತರ ಮುಂದುವರಿಸಿತು. ಈಗ ಕೂಡ ಲಾಕ್‍ಡೌನ್ ಕಾರಣದಿಂದ ಪ್ರತ್ಯಕ್ಷ ಸಭೆಗಳನ್ನು ಆಯೋಜಿಸಲು ಸಾಧ್ಯವಿಲ್ಲದ ಕಾರಣ ಸಮಿತಿಯ ವತಿಯಿಂದ ‘ಆನ್‍ಲೈನ್’ ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಯನ್ನು ಆಯೋಜಿಸಲಾಗಿದೆ. ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳ ಅವಶ್ಯಕತೆಗಳು, ವಾಸ್ತವದಲ್ಲಿ ಸನಾತನ ಹಿಂದೂ ಧರ್ಮವು ಭಾರತದ ಆತ್ಮವಾಗಿದೆ. ಯಾವಾಗ ದೇಶದಲ್ಲಿ ಧರ್ಮಕ್ಕೆ ಪ್ರತಿಷ್ಠೆ ಇತ್ತೋ, ಆಗ ಭಾರತ ವೈಭವದ ಶಿಖರದಲ್ಲಿತ್ತು; ಆದರೆ ಮೊಘಲರು, ಆಂಗ್ಲರು ಮುಂತಾದ ಪರಕೀಯ ದಾಳಿಕೋರರು ಭಾರತದ ಶಕ್ತಿಯ ಕೇಂದ್ರವನ್ನು ಗುರುತಿಸಿ ಹಿಂದೂ ಧರ್ಮದ ಮೇಲೆ ಆಘಾತ ಮಾಡಿ ಭಾರತೀಯರ ಸನಾತನ ಧರ್ಮದೊಂದಿಗಿನ ಹೊಕ್ಕಳಬಳ್ಳಿಯ ಸಂಬಂಧವನ್ನು ಹೇಗೆ ತುಂಡರಿಸಬಹುದೆಂದು ಕಂಡು ಹಿಡಿದರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ನಿಜವಾಗಿಯೂ ದೇಶದ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಶ್ರದ್ದೆ, ಭಕ್ತಿ , ಧರ್ಮ-ಪರಂಪರೆಯ ರಕ್ಷಣೆಯಾಗಬೇಕಿತ್ತು; ಆದರೆ ದುರ್ಭಾಗ್ಯದಿಂದ ಹಾಗಾಗಲಿಲ್ಲ. ತದ್ವಿರುದ್ಧ ಭಾರತದ ಸಂವಿಧಾನದಲ್ಲಿ ಅನಧಿಕೃತವಾಗಿ ‘ಧರ್ಮನಿರಪೇಕ್ಷತೆ’ (ಜಾತ್ಯತೀತತೆ) ಮತ್ತು ‘ಸಮಾಜವಾದ’ ಈ ಶಬ್ದವನ್ನು ತುರುಕಿಸಲಾಯಿತು. ಈಗ ಈ ಚಿತ್ರಣವನ್ನು ಬದಲಾಯಿಸುವ ಕಾಲ ಬಂದಿದೆ. ಅದಕ್ಕಾಗಿಯೇ ಈ ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳ ಆಯೋಜನೆಯನ್ನು ಮಾಡಲಾಗುತ್ತದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲು ಸಾಮಾನ್ಯ ಹಿಂದೂ, ಹಿಂದುತ್ವನಿಷ್ಠೆ ಸಂಘಟನೆಗಳು ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸುವುದೇ ಈ ಧರ್ಮಜಾಗೃತಿ ಸಭೆಗಳ ಮುಖ್ಯ ಉದ್ದೇಶವಾಗಿದೆ. ಇಂದು ಕೂಡ ದೇಶದಲ್ಲಿ ‘ಲವ್ ಜಿಹಾದ್’ನ ಘಟನೆಗಳು ನಡೆಯುತ್ತಲೇ ಇವೆ, ದಕ್ಷಿಣ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಹಾಗೂ ಮತಾಂತರದ ಘಟನೆಗಳು ಘಟಿಸುತ್ತಿವೆ, ಚಲನಚಿತ್ರ-ವೆಬ್‍ಸಿರೀಸ್ ಇವುಗಳ ಮೂಲಕ ಹಿಂದೂಗಳ ದೇವತೆಗಳ ವಿಡಂಬನೆ ಮಾಡಲಾಗುತ್ತಿದೆ, ಶತುರಾಷ್ಟ್ರಗಳು ಭಾರತದಲ್ಲಿ ಅವರ ತೆರೆಮರೆಯ ಏಜೆಂಟರ ಮೂಲಕ ಭಾರತದ್ವೇಷನ್ನು ಹರಡಿಸಲಾಗುತ್ತಿದೆ. ಇಂತಹ ಘಟನೆಗಳನ್ನು ತಡೆಗಟ್ಟಲಿಕ್ಕಿದ್ದರೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರತವಾಗಿರುವ ರಾಷ್ಟ್ರಪ್ರೇಮಿ ಹಾಗೂ ಧರ್ಮಪ್ರೇಮಿ ಹಿಂದೂಗಳ ಸಂಘಟನೆ ಮಾಡುವ ಅವಶ್ಯಕತೆಯಿದೆ. ರಾಮಮಂದಿರ ಸಹಿತ ರಾಮರಾಜ್ಯವನ್ನು ಪ್ರತ್ಯಕ್ಷ ಅವತರಿಸಲು ಭಗೀರತ ಪ್ರಯತ್ನ ಮಾಡುವುದು ಹಿಂದೂಗಳ ಧರ್ಮಕರ್ತವ್ಯವಾಗಿದೆ. ಆ ದೃಷ್ಟಿಯಿಂದ ಆಯೋಜಿಸಿದ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ತಪ್ಪದೇ ಉಪಸ್ಥಿತರಿದ್ದು ಈ ಕಾರ್ಯಕ್ಕೆ ಯೋಗದಾನ ನೀಡಿ !