Monday, January 20, 2025
ಹೆಚ್ಚಿನ ಸುದ್ದಿ

ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ದೌರ್ಜನ್ಯ; ವಿದ್ಯುತ್ ಶಾಕ್ ಕೊಟ್ಟು ಥಳಿಸಿದ ಪೊಲೀಸರು-ಕಹಳೆ ನ್ಯೂಸ್

ಭುವನೇಶ್ವರ : ಒಡಿಶಾ ಮಾನವ ಹಕ್ಕುಗಳ ಆಯೋಗ ಮಲ್ಕಂಗೇರಿ ಜಿಲ್ಲೆಯ ಚಿತ್ರಕೊಂಡ ಪೊಲೀಸ್ ಠಾಣೆಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಸುಯೊ ಮೋಟೋ ಅಡಿ ಕೇಸ್ ದಾಖಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಆಯೋಗ ಮಾರ್ಚ್ 30 ರೊಳಗೆ ವರದಿ ಸಲ್ಲಿಸುವಂತೆ ಮಲ್ಕಂಗಿರಿ ಎಸ್‍ಪಿಗೆ ನಿರ್ದೇಶನ ನೀಡಿದೆ. ಮಾಹಿತಿಯ ಪ್ರಕಾರ, ಚಿನ್ನದ ಆಭರಣಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಫೆಬ್ರವರಿ 12 ರಂದು ಪೊಲೀಸರು ನಾಲ್ಕು ಬಾಲಕರನ್ನು ತಮ್ಮ ಮನೆಗಳಿಂದ ಎತ್ತಿಕೊಂಡು ಹೋಗಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಅವರನ್ನು ನ್ಯಾಯಾಲಯಕ್ಕೆ ಕಳುಹಿಸುವ ಬದಲು, ಪೊಲೀಸರು ಆರೋಪಿಗಳನ್ನು ಥಳಿಸಿ, ಪೊಲೀಸ್ ಠಾಣೆಯಲ್ಲಿ ನಾಲ್ಕು ದಿನಗಳ ಕಾಲ ವಿದ್ಯುತ್ ಶಾಕ್ ನೀಡಿದ್ದಾರೆ. ಇದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಹೊರಗಿನವರು ಬಂದು ಥಳಿಸಿದ್ದಾರೆ ಎಂದು ನಾಲ್ವರು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು