Saturday, November 23, 2024
ಹೆಚ್ಚಿನ ಸುದ್ದಿ

94 c ತಿರಸ್ಕ್ರತ ಫಲಾನುಭವಿಗಳ ಅಜಿ೯ಯನ್ನು ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮರು ತನಿಖೆ ನಡೆಸಿ ಶೀಘ್ರ ಹಕ್ಕು ಪತ್ರ ದೊರಕಿಸಿಕೊಡುವ ಭರವಸೆಯನ್ನು ನೀಡಿದ ಶಾಸಕ ಹರೀಶ್ ಪೂಂಜ-ಕಹಳೆ ನ್ಯೂಸ್

ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ತಿರಸ್ಕ್ರತಗೊಂಡಿರುವ 94 c ಫಲಾನುಭವಿಗಳ ಅಜಿ೯ಯನ್ನು ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮರು ತನಿಖೆ ನಡೆಸಿ ಅಹ೯ ಫಲಾನುಭವಿಗಳನ್ನು ಗುರುತಿಸಿ ಶೀಘ್ರ ಹಕ್ಕು ಪತ್ರ ದೊರಕಿಸಿಕೊಡುವ ಭರವಸೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ವೇಣೂರು ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ವೇಣೂರು ಬಜಿರೆ ಕರಿಮಣೇಲು ಮೂಡುಕೋಡಿ ಗ್ರಾಮದ 73 ಮಂದಿ 94 c ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡುತಿದ್ದರು. ಕಾರ್ಯಕ್ರಮದಲ್ಲಿ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಅರುಣ್ ಹೆಗ್ಡೆ ಪ್ರಭಾರ ತಹಶಿಲ್ದಾರ್ ರಮೇಶ್ ಬಾಬು ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ ವೇಣೂರು ಕ್ರಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ ಪಂಚಾಯತ್ ಸದಸ್ಯರಾದ ಲೋಕಯ್ಯ ಪೂಜಾರಿ ಸತೀಶ್ ಹೆಗ್ಡೆ ಅಣ್ಣು ಯಶೋಧರ ಹೆಗ್ಡೆ ನೇಮಯ್ಯ ಕುಲಾಲ್ ಹರೀಶ್ ಪಿ ಎಸ್ ಲಕ್ಷ್ಮಣ ಪೂಜಾರಿ ರಾಜೇಶ್ ಪೂಜಾರಿ ಶೋಭಾ ನಯನ ಲೀಲಾವತಿ ಪುಷ್ಪ ಗ್ರಾಮಕರಣಿಕರಾದ ಸುಧೀಶ್ ದೇವಯ್ಯ ಉಮೇಶ್ ನೈಮ೯ಲ್ಯ ಸಮಿತಿಯ ಸದಸ್ಯರಾದ ಅನೂಪ್ ಜೆ ಪಾಯಸ್ ಹಾಗೂ ಝಕ್ರಿಯಾ ಉಪಸ್ಥಿತರಿದ್ದರು. ಉಪಾಧ್ಯಕ್ಷ ಅರುಣ್ ಕ್ರಾಸ್ತ ಸ್ವಾಗತಿಸಿ ಪಿ.ಡಿ.ಓ ಸುಧಾಕರ್ ಡಿ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು