Recent Posts

Monday, January 27, 2025
ಹೆಚ್ಚಿನ ಸುದ್ದಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಳಿ ಮೀನುಗಾರ ಮಹಿಳೆಯ ಆಳಲು; ತಪ್ಪಾಗಿ ಭಾಷಾಂತರಿಸಿದ ಪುದುಚೇರಿಯ ಮುಖ್ಯಮಂತ್ರಿ-ಕಹಳೆ ನ್ಯೂಸ್

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿನ್ನೆ ಪುದುಚೇರಿಗೆ ಭೇಟಿ ನೀಡಿದ್ದು, ಇದರ ಭಾಗವಾಗಿ ಕರಾವಳಿ ತೀರದ ಹಳ್ಳಿಯೊಂದಕ್ಕೂ ಭೇಟಿ ನೀಡಿದ್ದರು. ಅಲ್ಲಿ ಮೀನುಗಾರ ಮಹಿಳೆಯೊಬ್ಬರು ಹೇಳಿಕೊಂಡ ಸಮಸ್ಯೆಯನ್ನು ಪುದುಚೇರಿಯ ಮುಖ್ಯಮಂತ್ರಿ ನಾರಾಯಣಸಾಮಿ ತಪ್ಪಾಗಿ ಭಾಷಾಂತರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೆ ತೀವ್ರವಾದ ಖಂಡನೆ ವ್ಯಕ್ತವಾಗಿದೆ. ಆದರೆ ಇದನ್ನು ರಾಹುಲ್ ಗಾಂಧಿಯವರಿಗೆ ತಪ್ಪಾಗಿ ಭಾಷಾಂತರ ಮಾಡಿದ ಮುಖ್ಯಮಂತ್ರಿ ನಾರಾಯಣಸಾಮಿ, ನಿವಾರ್ ಚಂಡಮಾರುತದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ನಾನು ಪರಿಹಾರ ನೀಡಿದ್ದೇನೆ. ಅದನ್ನೇ ಆಕೆ ಹೇಳುತ್ತಿದ್ದಾಳೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಮಹಿಳೆ, ಕಡಲತೀರದ ನಮ್ಮ ಬದುಕು ಹೀಗೆ ಇದೆ. ನಮಗೆ ಯಾರೂ ಸಹಕರಿಸುತ್ತಿಲ್ಲ. ಅವರೇ (ಮುಖ್ಯಮಂತ್ರಿ ನಾರಾಯಣಸಾಮಿ) ಇಲ್ಲಿದ್ದಾರೆ. ಅವರನ್ನೇ ಕೇಳಿ, ಚಂಡಮಾರುತದ ಸಂದರ್ಭದಲ್ಲಿ ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಸಂವಾದದಲ್ಲಿ ಮಹಿಳೆಯ ಕಷ್ಟವನ್ನು ತಪ್ಪಾಗಿ ಭಾಷಾಂತರ ಮಾಡಲಾಗಿದೆ.