Recent Posts

Monday, January 20, 2025
ಬೆಂಗಳೂರು

ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ನಾಲಿಗೆ ಹರಿಬಿಟ್ಟ ಶಾಂತಿನಗರ ಶಾಸಕ ಹ್ಯಾರಿಸ್-ಕಹಳೆ ನ್ಯೂಸ್

ಬೆಂಗಳೂರು : ಶಾಂತಿನಗರ ಶಾಸಕ ಎನ್ .ಎ.ಹ್ಯಾರಿಸ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರನಟ ಡಾ.ರಾಜ್ ಕುಮಾರ್ ಅವರ ಪ್ರತಿಮೆ ವಿಚಾರಕ್ಕೆ ನಾಲಿಗೆ ಹರಿಬಿಟ್ಟಿದ್ದು, ಡಾ.ರಾಜ್ ಪ್ರತಿಮೆ ವಿಚಾರವಾಗಿ ಕಾಮಕಾರಿ ವೀಕ್ಷಣೆಗೆ ತೆರಳಿದ್ದ ಶಾಸಕ ಹ್ಯಾರಿಸ್, ಪ್ರತಿಮೆ ಮಾಡೋದೆ ದೊಡ್ಡ ಕಥೆ, ಅದಕ್ಕೆ ಆಫೀಸ್ ಬೇರೆ ಕಟ್ಟೋಕಾಗುತ್ತಾ ? ಅವರ್ಯಾರೋ ಪ್ರತಿಮೆ ಅಂತ ಮಾಡಿರ್ತಾರೆ, ಅದಕ್ಕೆ ಕವರ್ ಬೇರೆ ಮಾಡ್ಬೇಕಾ? ಹಾಗೆ ಕವರ್ ಮಾಡಬೇಕು ಪ್ರೊಟೆಕ್ಷನ್ ಗೆ ಅನ್ನುವುದಾದರೆ ಪ್ರತಿಮೆಯನ್ನು ಮನೆಯಲ್ಲಿಯೇ ಇಟ್ಕೊಂಡಿರ್ಬೇಕು. ರಸ್ತೆಯಲ್ಲಿ ಯಾಕೆ ಇಡಬೇಕು ಎಂದು ಹೇಳಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕ ಹ್ಯಾರಿಸ್ ವಿರುದ್ಧ ಅಣ್ಣಾವ್ರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು