ಜನ ಸ್ವಯಂ ಪ್ರೇರಿತವಾಗಿ ರಾಮ ಮಂದಿರ ಆಗಬೇಕು ಎಂದು ಹಣ ನೀಡುತ್ತಿದ್ದಾರೆ ಇದು ಕೇವಲ ಬಿಜೆಪಿಯ ಮಂದಿರವಲ್ಲ, ಇದು ರಾಷ್ಟ್ರೀಯ ಸ್ಮಾರಕ; ರೇಣುಕಾಚಾರ್ಯ-ಕಹಳೆ ನ್ಯೂಸ್
ಬೆಂಗಳೂರು : ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು, ಜನ ಸ್ವಯಂ ಪ್ರೇರಿತವಾಗಿ ರಾಮ ಮಂದಿರ ಆಗಬೇಕು ಎಂದು ಹಣ ನೀಡುತ್ತಿದ್ದಾರೆ. ಇದು ಕೇವಲ ಬಿಜೆಪಿಯ ಮಂದಿರವಲ್ಲ, ಇದು ರಾಷ್ಟ್ರೀಯ ಸ್ಮಾರಕ ಎಂದು ಹೇಳಿದ್ದಾರೆ.
ಇದುವರೆಗೂ ಎಲ್ಲಿಯೂ ಹಣವನ್ನು ಬಲವಂತವಾಗಿ ವಸೂಲಿ ಮಾಡಿರುವ ಉದಾಹರಣೆ ಇಲ್ಲ. ಯಾರು ಆ ರೀತಿ ನಕಲಿಯಾಗಿ ಮಾಡುತ್ತಾರೋ ಅವರ ಮೇಲೆ ಕೇಸು ನೀಡಿ ಎಂದು ಅವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಣಿಗೆ ನೀಡದ ಮನೆಯನ್ನು ಗುರುತು ಹಾಕುತ್ತಿದ್ದಾರೆ ಎಂದು ನೀವು ತೋರಿಸಿ, ಯಾರು ನಿಮಗೆ ಬೆದರಿಕೆ ಹಾಕಿದ್ದಾರೆ ಎಂದು ಪ್ರಶ್ನಿಸಿರುವ ರೇಣುಕಾಚಾರ್ಯ, ಕುಮಾರಸ್ವಾಮಿಯವರು ಯಾವುದೆ ವಿಷಯ ಇಲ್ಲದ್ದಕ್ಕೆ ವಿಷಯಾಂತರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.