Recent Posts

Monday, January 20, 2025
ಪುತ್ತೂರು

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ದಿವಂಗತ ನ್ಯಾ.ರಾಮಾಜೋಯಿಸ್‍ರಿಗೆ ನುಡಿ ನಮನ ಪ್ರಯತ್ನ ಪಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು; ದು. ಗು. ಲಕ್ಷ್ಮಣ-ಕಹಳೆ ನ್ಯೂಸ್

ಪುತ್ತೂರು : ಜೀವನದಲ್ಲಿ ಪ್ರಯತ್ನ ಪಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ನ್ಯಾ.ರಾಮಾಜೋಯಿಸ್ ಅವರ ಜೀವನವೇ ಒಂದು ಉದಾಹರಣೆ. ರಾಮಾಜೋಯಿಸ್ ಅವರ ಇಚ್ಛಾಶಕ್ತಿ ನಮಗೆಲ್ಲ ಪ್ರೇರಣೆ ಎಂದು ಹೊಸದಿಗಂತ ದಿನಪತ್ರಿಕೆಯ ಹಿರಿಯ ಪತ್ರಕರ್ತರಾದ ದು.ಗು.ಲಕ್ಷ್ಮಣ ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾನೂನು ಕಾಲೇಜಿನ ಸಹಯೋಗದಲ್ಲಿ ದಿನಾಂಕ 18/02/2021 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ದಿವಂಗತ ನ್ಯಾ.ರಾಮಾಜೋಯಿಸ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ನ್ಯಾಯಾವಾದಿಯಾಗಿ, ನ್ಯಾಯಮೂರ್ತಿಯಾಗಿ, ಲೇಖಕರಾಗಿ, ರಾಜ್ಯ ಸಭಾ ಸದಸ್ಯರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ಸಾಧನೆಗಳು ನಮಗೆಲ್ಲ ಪ್ರೇರಣೆಎಂದು ಹೇಳಿದರು.“ನನ್ನ ಹಾಗೂ ನ್ಯಾ.ರಾಮಾಜೋಯಿಸ್ ಅವರ ನಂಟು ಆರಂಭವಾಗಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ರಾಮಾಜೋಯಿಸ್ ಅವರನ್ನು ಯಾದವ್ ರಾವ್ ಜೋಷಿಯವರು ಕಾನೂನು ಶಿಕ್ಷಣ ಕಲಿಯಲು ಬೆಂಗಳೂರಿಗೆ ಕರೆದುಕೊಂಡು ಬಂದರು. ಅದುವೇ ರಾಮಾಜೋಯಿಸ್ ಅವರ ಜೀವನಕ್ಕೆ ತಿರುವು ನೀಡಿತು. ವಿಕ್ರಮ ವಾರ ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡು ತನ್ನ ಕಾನೂನು ವಿದ್ಯಾಭ್ಯಾಸವನ್ನು ಪೂರೈಸಿದರು. ನಂತರ ನ್ಯಾಯವಾದಿಯಾಗಿ ವೃತ್ತಿ ಅರಂಭಿಸಿದಾಗ ಕೈಗೆ ತೆಗೆದುಕೊಂಡ ಮೊಕದ್ದಮೆಗಳಲ್ಲಿ ಗೆಲುವು ಸಿಗಲು ಆರಂಭಿಸಿದಾಗ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ಏರಲಾರಂಭಿಸಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ವಾಜಪೇಯಿ, ಅಡ್ವಾಣಿಯವರ ಪರವಾಗಿ ವಾದಿಸಿದ್ದರು. ಆ ಹಂತದಲ್ಲಿ 21 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದರು. ನಂತರ ಜನತಾ ಪಕ್ಷದ ಸರ್ಕಾರದಲ್ಲಿ ಕರ್ನಾಟಕ ಹೈಕೋರ್ಟ್‍ನ ನ್ಯಾಯಾಧೀಶರಾಗಿ ನೇಮಕಗೊಂಡು ಹಲವು ನಿಷ್ಪಕ್ಷಪಾತ ತೀರ್ಪುಗಳನ್ನು ಕೊಡುವಲ್ಲಿ ಯಶಸ್ವಿಯಾದರು. ಜೀವನದ ನಂತರದ ಕಾಲ ಘಟ್ಟದಲ್ಲಿ ಕಾನೂನು ಕ್ಷೇತ್ರಕ್ಕೆ ಉಪಯೋಗವಾಗುವಂತಹ ಹಲವಾರು ಪುಸ್ತಕಗಳನ್ನು ಬರೆದರು. ಹಾಗೇಯೇ ನಿವೃತ್ತಿಯಾದ ನಂತರ ರಾಜ್ಯ ಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿ ಹಲವರಿಗೆ ಆದರ್ಶಪ್ರಾಯರಾದರು. ಹೀಗೆ ಹಲವು ವಿಚಾರಗಳಲ್ಲಿ ದಿವಂಗತ ನ್ಯಾ.ರಾಮಾಜೋಯಿಸ್ ಅವರು ನಮಗೆಲ್ಲರಿಗೂ ಆದರ್ಶಪ್ರಾಯ ಎಂದು ದು.ಗು.ಲಕ್ಷ್ಮಣ ಅವರು ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಕೆ.ಎಂ.ಕೃಷ್ಣ ಭಟ್, ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಅವರು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಕುಮಾರ್ ಶೇಣಿ ಕಾರ್ಯಕ್ರಮ ನಿರ್ವಹಿಸಿದರು.