ಕೋಟ ‘ಶ್ರೀ ಅಮೃತೇಶ್ವರಿ ದೇವಸ್ಥಾನ’ದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ-ಕಹಳೆ ನ್ಯೂಸ್
ಕೋಟ : ಕೋಟ ‘ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಾಲಯ’ ದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ನಡೆಯಿತು.
ರಾಜ್ಯ ಸರಕಾರದ ಹಿಂದೂ ಧಾರ್ಮಿಕ ದತ್ತಿ ಸಚಿವಾಲಯದ ಮಹಾತ್ವಕಾಂಕ್ಷೆಯ ಈ ಯೋಜನೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸರಕಾರದ ವತಿಯಿಂದ ಜಾರಿಗೆ ತಂದು ಬಡ ಹಾಗೂ ಮಧ್ಯಮವರ್ಗದವರ ಬಾಳಿಗೆ ನೆರವಾದರು. ಶ್ರೀ ದೇವಾಲಯದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಾವಿರಾರು ಜನರು ಸಾಕ್ಷಿಯಾಗಿ ವೇ.ಮೂ.ಮಧುಸೂದನ್ ಬಾಯಿರಿ, ರಾಜೇಂದ್ರ ಅಡಿಗ ನೇತ್ರತ್ವದ ತಂಡ ಉಪಸ್ಥಿತರಿದ್ದರು. ದೇವಾಲಯದ ಅಧ್ಯಕ್ಷರಾಗಿ ಆನಂದ್ ಸಿಕುಂದರ್ ಇದೀಗ ಎರಡನೇ ಸಾಮೂಹಿಕ ಮದುವೆಗೆ ವೇದಿಕೆ ಕಲ್ಪಿಸುವ ಮೂಲಕ ಒಟ್ಟು 10 ಜೋಡಿಗಳು ಈ ವಿವಾಹದಲ್ಲಿ ಹಸೆಮಣೆ ಏರಿದರು.