Sunday, January 19, 2025
ರಾಜಕೀಯ

ಗೋಕಳ್ಳರ ತಕ್ಷಣವೇ ಬಂಧಿಸಿ – ಸುಳ್ಯ ಬಿಜೆಪಿ ಒತ್ತಾಯ

ಸುಳ್ಯ: ಕೈರಂಗಳ ಪುಣ್ಯಕೋಟಿ ನಗರದ ಗೋಶಾಲೆಯಲ್ಲಿ ನಡೆದ ಗೋಕಳ್ಳರ ತಕ್ಷಣವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಬಿಜೆಪಿ ಒತ್ತಾಯಿಸುತ್ತದೆ ಎಂದು ಸುಳ್ಯ ಬಿಜೆಪಿ ಮಾಧ್ಯಮ ಪ್ರಮುಖ್ ಮುಳಿಯ ಕೇಶವ ಭಟ್ ತಿಳಿಸಿದ್ದಾರೆ.

ಗೋಕಳ್ಳರು ಬೆಳಗಿನ ಜಾವ ಮಾರಕ ಆಯುಧಗಳೊಂದಿಗೆ ಗೋಶಾಲೆಗೆ ನುಗ್ಗಿ ಗೋವನ್ನು ಕಳವು ಮಾಡಿರುವುದೂ ಅಲ್ಲದೆ ಈ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿರುವುದು ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ. ಕಳೆದ 3 ದಿನಗಳಿಂದ ಕೈರಂಗಳದ ಗೋಶಾಲೆ ಆವರಣದಲ್ಲಿ ಗೋಕಳ್ಳರ ಬಂಧನಕ್ಕೆ ಒತ್ತಾಯಿಸಿ ಪ್ರಮುಖರಾದ ರಾಜಾರಾಮ ಭಟ್ ಅವರಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸುಳ್ಯ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಅಲ್ಲದೆ ಹಿಂದೂ ಸಮಾಜಕ್ಕೆ ಗೋಕಳ್ಳರು ಕಳೆದ ಕೆಲವು ಸಮಯಗಳಿಂದ ಸವಾಲು ಹಾಕುತ್ತಿದ್ದಾರೆ. ಕೃಷಿಕರಿಗೂ ಆತಂಕದ ಸ್ಥಿತಿ ಉಂಟಾಗಿದೆ. ಹಟ್ಟಿಯಿಂದಲೇ ಗೋವುಗಳ ಕಳ್ಳತನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಕೈರಂಗಳದಲ್ಲಿ ಮತ್ತೆ ಗೋಕಳ್ಳತನವಾಗಿದೆ. ಹೀಗಾಗಿ ಗೋಕಳ್ಳರ ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯ ಮಾಡುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮುಳಿಯ ಕೇಶವ ಭಟ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು