Monday, January 20, 2025
ಹೆಚ್ಚಿನ ಸುದ್ದಿ

ಕಾಂಚನದಲ್ಲಿ ಫೆಬ್ರುವರಿ 27 ರಂದು 67ನೇ ವರ್ಷದ ಕಾಂಚನೋತ್ಸವ-ಕಹಳೆ ನ್ಯೂಸ್

ಕಾಂಚನದಲ್ಲಿ ಫೆಬ್ರುವರಿ 27 ರಂದು 67ನೇ ವರ್ಷದ ಕಾಂಚನೋತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಂಗೀತ ಪೋಷಕರಾಗಿ ಬರಮಾಡಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಗೀತ ಪೋಷಣೆಯ ಸ್ಥಾನತ್ರಯಗಳು – ಅರಮನೆ, ಗುರುಮನೆ, ದೇವರಮನೆಗಳು. ಧರ್ಮಪೀಠಗಳಾದ ಗುರುಮನೆಗಳಲ್ಲಿ, ಮಠಗಳಲ್ಲಿ ಭಗವದ್ಭಕ್ತಿಯನ್ನೂ ಶೀಲಸಂಪನ್ನತೆಯನ್ನೂ ಆಧ್ಯಾತ್ಮಿಕ ಪ್ರಜ್ಞೆಯನ್ನೂ ಜನಸಾಮಾನ್ಯರಲ್ಲಿ ಜಾಗೃತಗೊಳಿಸುವುದಕ್ಕಾಗಿ ಸಂಗೀತಕಚೇರಿಗಳು ನಡೆಯುತ್ತಿದ್ದವು. ದೇವಸ್ಥಾನಗಳೂ ರಾಜಾಸ್ಥಾನಗಳಂತೆ, ಧರ್ಮಸ್ಥಾನಗಳಂತೆ, ಬಹುಶಃ ಇನ್ನೂ ಹೆಚ್ಚಾಗಿ, ಇನ್ನೂ ಚೆನ್ನಾಗಿ ನಮ್ಮ ಸಂಗೀತವನ್ನು ಪೋಷಿಸಿ ಬೆಳೆಸಿದವು. ವಿಲಾಸದ, ಆಡಂಬರದ ಬಹಿರಂಗ ನಿಬರ್ಂಧಗಳ ಬಾಧೆಯಿಲ್ಲದೆ ಇಲ್ಲಿ ಸಂಗೀತ ಕಚೇರಿಗಳು ನಡೆಯುತ್ತಿದ್ದವು , ಅಲ್ಲ, ಸಂಗೀತ ಸೇವೆ, ಸಂಗೀತ ಸಮಾರಾಧನೆಯು ನಡೆಯುತ್ತಿತ್ತು. ದೇವರಿಗೆ ಸೇವೆ ಅಂಗಭೋಗ, ರಂಗಭೋಗ ಎಂದು ಎರಡು ರೀತಿಯಾಗಿ ದೇವಾಲಯಗಳಲ್ಲಿ ನಡೆಯುತ್ತದೆ. ಹೂ, ಗಂಧ, ಧೂಪ, ದೀಪ, ನೈವೇದ್ಯ ಇತ್ಯಾದಿಗಳು ಅಂಗಭೋಗಕ್ಕೆ ; ಅಷ್ಟಾವಧಾನ ಸೇವೆ ರಂಗಭೋಗಕ್ಕೆ. ಈ ಎಂಟು ಅವಧಾನ ಸೇವೆಗಳಲ್ಲಿ ಮುಖ್ಯವಾದುದು ಸಂಗೀತ ಮತ್ತು ನರ್ತನ. ರಂಗಭೋಗಕ್ಕೆಂದು ದೊರೆಗಳೂ ದಾನಿಗಳೂ ಕಲಾವಿದರೂ ದೇವಾಲಯಗಳಿಗೆ ಬಿಟ್ಟ ದತ್ತಿಗಳಿಗೆ ಕೊನೆಯಿಲ್ಲ. ಕರ್ಣಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಇರುವ ಶಾಸನಗಳಲ್ಲಿ ಅತ್ಯಂತ ಹೆಚ್ಚಿನ ಪಾಲು ಹೀಗೆ ದೇವಸ್ಥಾನಕ್ಕೆ ಕೊಟ್ಟ ದಾನಗಳನ್ನೇ ಹೇಳಿದೆ. ದೇವಸ್ಥಾನಗಳ ಗರ್ಭಗೃಹದ ಮುಂದೆ ಒಂದು ಮಂಟಪವನ್ನೂ ಅದರಲ್ಲಿ ಒಂದು ರಂಗ(ವೇದಿಕೆ)ಯನ್ನೂ ನಿರ್ಮಿಸುವುದು ದೇವಾಲಯ ನಿರ್ಮಾಣದ ಅವಿಭಾಜ್ಯ ಅಂಗವಾಗಿತ್ತು. ಇವುಗಳಲ್ಲಿ ಬೆಳೆದ ಕಲೆಗಳಿಂದ ಭಕ್ತರ ಇಂದ್ರಿಯಗಳೂ ಮನಸ್ಸೂ ಪರಿಶುದ್ಧವಾಗಿ, ಪವಿತ್ರವಾಗಿ, ಸಂಸ್ಕಾರವನ್ನು ಪಡೆದುಕೊಳ್ಳುತ್ತಿದ್ದವು. ಈಗಲೂ ಸಹ ದೇವಾಲಯಗಳಲ್ಲಿ ನಿತ್ಯಪೂಜೆ, ವಿಶೇಷ ಉತ್ಸವಗಳಲ್ಲಿ ಸಂಗೀತಕಚೇರಿಗಳು ಪ್ರಸಿದ್ಧವೂ ಜನಪ್ರಿಯವೂ ಆದ ಪದ್ಧತಿಯನ್ನೇ ಏರ್ಪಡಿಸಿಕೊಂಡಿವೆ. ಇವೇ ಅಲ್ಲದೆ ಶಿಷ್ಯನು ಸ್ನಾತಕನಾದಾಗ ಅವನ ಸಂಗೀತ ಕಚೇರಿಯನ್ನು ಆಯಾ ಕಲಾಜ್ಯೇಷ್ಠರ, ಶ್ರೇಷ್ಠರ ಸಮ್ಮುಖದಲ್ಲಿ ಏರ್ಪಡಿಸಲಾಗುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು