Monday, January 20, 2025
ದಕ್ಷಿಣ ಕನ್ನಡಸುದ್ದಿ

Breaking News : ಕರಾವಳಿಯ ಪ್ರತಿಷ್ಠಿತ ಬಂಟ ಸಮುದಾಯದ ಮಗಳು ಕ್ರಿಶ್ಚಿಯನ್ ಯುವಕನೊಂದಿಗೆ ವಿವಾಹ ; ಮಾಲಾಡಿ ನಡೆಗೆ ಹಿಂದೂ ಸಂಘಟನೆಗಳು ಗರಂ – ಕಹಳೆ ನ್ಯೂಸ್

ಮಂಗಳೂರು : ಕಳೆದ ಕೆಲ ದಿನಗಳಿಂದ ಪ್ರತಿಷ್ಠಿತ ಬಂಟ ಸಮುದಾಯದ ಮದುವೆಯೊಂದು ಕರಾವಳಿಯಲ್ಲಿ ಭಾರಿ‌ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಷ್ಠಿತ ಮಾಲಾಡಿ ಮನೆಯ ಮಗಳು ಕ್ರಿಶ್ಚಿಯನ್ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ರೈ ಹಾಗೂ ಅವರ ಪತ್ನಿ ಕ್ರಿಶ್ಚಿಯನ್ ಸಂಸ್ಕ್ರಿತಿಯಂತೆ ಕ್ಯಾಂಡಲ್ ಹೊತ್ತಿಸಿ ಮದುವೆಯಲ್ಲಿ ಭಾಗಿಯಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯ ಮೇಲೆ ಹಿಂದೂ ಧರ್ಮ, ಸಂಸ್ಕೃತಿ ಎಂದು ಉದ್ದುದ್ದ ಭಾಷಣ ಬಿಗಿಯುತ್ತಿದ್ದ, ರೈ ದಂಪತಿಗಳು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದು, ಅಲ್ಲದೆ, ರೈ ಪತ್ನಿ ಪ್ರತಿಷ್ಠಿತ ದೇವಾಲಯಗಳ ಬ್ರಹ್ಮಕಲಶೋತ್ಸವದಲ್ಲೂ ಪ್ರಮುಖ ಜವಾಬ್ದಾರಿ ಹೊಂದಿ ಭಾಗಿಯಾಗಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ವಿ.ಎಚ್.ಪಿ. & ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್ ಆಕ್ರೋಶ ಹೊರ ಹಾಕಿದ್ದು, ಅಜಿತ್ ರೈ ಹಾಗೂ ಆಶಕ್ಕ ನಿಮ್ಮ ನಡೆ ನನಗೆ ನೋವಾಗಿದೆ ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.