ಬೆಂಗಳೂರು : ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಟ್ರೈಲರ್ ರಿಲೀಸ್ ಆಗಿದ್ದು, ಜೂನಿಯರ್ ಚಿರು ಮತ್ತು ಮೇಘನಾರಾಜ್ ಸಿನಿಮಾ ಟ್ರೈಲರ್ ಲಾಂಚ್ ಮಾಡಿದ್ದಾರೆ.
ಇದು ಪೊಗರು ಸಿನಿಮಾ ರಿಲೀಸ್ ಆದ ದಿನವೇ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನೆಮಾವನ್ನು ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಈ ಚಿತ್ರ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರವಾಗಿದೆ. ಚಿರು ಸಿನಿಮಾದ ಟ್ರೈಲರ್ ಗೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಒಂದೆಡೆ ಪೊಗರು ಚಿತ್ರ ರಿಲೀಸ್ ಆಗಿದ್ದು, ಇನ್ನೊಂದೆಡೆಯಲ್ಲಿ ರಾಜಮಾರ್ತಾಂಡ ಟ್ರೈಲರ್ ಕೂಡ ರಿಲೀಸ್ ಆಗಿದೆ. ಒಂದೇ ದಿನದಲ್ಲಿ ಸಹೋದರರ ಚಿತ್ರ ಮತ್ತು ಟ್ರೈಲರ್ ಅಬ್ಬರಿಸಿದೆ.