Recent Posts

Monday, January 20, 2025
ಬೆಂಗಳೂರು

ಮೆಡಿಕಲ್ ಕಾಲೇಜು ಮಾಲಿಕರ ಬಳಿ ಬರೋಬರಿ 81 ಕಿಲೋ ಚಿನ್ನ ಪತ್ತೆ-ಕಹಳೆ ನ್ಯೂಸ್

ಬೆಂಗಳೂರು : ಕೇರಳ ಮತ್ತು ಕರ್ನಾಟಕದ ಪ್ರತಿಷ್ಠಿತ ಆಸ್ವತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಬರೋಬರಿ 81 ಕಿಲೋ ಚಿನ್ನ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಮೌಲ್ಯ ಸುಮಾರು 30 ಕೋಟಿ ರೂಪಾಯಿಗಳಾಗಿದ್ದುಮ, ಇದು ಆದಾಯ ತೆರಿಗೆ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಇವುಗಳಿಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ನೀಡಲು ಮಾಲೀಕರು ವಿಫಲರಾಗಿದ್ದು, ಅತ್ಯಂತ ವ್ಯವಸ್ಥಿತವಾಗಿ ಕಾನೂನು ದುರುಪಯೋಗ ಪಡಿಸಿಕೊಂಡು ಮೆಡಿಕಲ್ ಕಾಲೇಜು ಮಾಲೀಕರು ತೆರಿಗೆ ವಂಚಿಸುತ್ತಿರುವುದನ್ನು ಪತ್ತೆಯಾಗಿದೆ. ಸಂಪತ್ತಿನ ಮೂಲ ಬಹಿರಂಗಪಡಿಸುವಂತೆ ಮಾಲೀಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಲಿದ್ದು, ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಕುರಿತಂತೆ ಕೂಡ ತನಿಖೆ ನಡೆಯುವ ಸಾಧ್ಯತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು