ವರದಾಯಿನಿ ಶ್ರೀ ವ್ಯಾಘ್ರಚಾಮುಂಡಿ ಸಾನಿಧ್ಯ ಶ್ರೀ ವಾಸುಕೀನಾಗಬ್ರಹ್ಮ, ಶ್ರೀ ರಕ್ತೇಶ್ವರಿ, ರಾಜಗುಳಿಗ ಸನ್ನಿಧಿ ಆರ್ಯಪು ಗ್ರಾಮದ ಸಂಪ್ಯದಲ್ಲಿ ಫೆಬ್ರವರಿ 21 ರಂದು ಮರಕ್ಕ ಚಾಮುಂಡಿಯ ಬ್ರಹ್ಮಕಲಶೋತ್ಸವ-ಕಹಳೆ ನ್ಯೂಸ್
ಪುತ್ತೂರು : ವರದಾಯಿನಿ ಶ್ರೀ ವ್ಯಾಘ್ರಚಾಮುಂಡಿ ಸಾನಿಧ್ಯ ಶ್ರೀ ವಾಸುಕೀನಾಗಬ್ರಹ್ಮ, ಶ್ರೀ ರಕ್ತೇಶ್ವರಿ, ರಾಜಗುಳಿಗ ಸನ್ನಿಧಿ ಆರ್ಯಪು ಗ್ರಾಮ, ಮರಕ್ಕ, ಸಂಪ್ಯದಲ್ಲಿ ಫೆಬ್ರವರಿ 21 ಅದಿತ್ಯವಾರದಂದು ಮರಕ್ಕ ಚಾಮುಂಡಿಯ ಬ್ರಹ್ಮಕಲಶೋತ್ಸವವು ನಡೆಯಲಿದೆ.
ಈ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಫೆಬ್ರವರಿ 21 ರಂದು ಅಪರಾಹ್ನ ಘಂಟೆ 11.58 ಕ್ಕೆ ಒದಗುವ ಅಭಿಜಿತ್ ಲಗ್ನ ಶುಭಮುಹೂರ್ತದಲ್ಲಿ ಕುಕ್ಕಾಡಿ ತಂತ್ರಿ ಶ್ರೀ ಪ್ರೀತಮ್ ಪುತ್ತೂರಾಯ ಇವರ ನೇತೃತ್ವದಲ್ಲಿ ನಡೆಯಲಿದೆ. ಹಾಗೆಯೇ ಬೆಳಗ್ಗೆ ಗಣಪತಿ ಹವನ, ಬಿಂಬ ಶುದ್ದಿ, ಕಲಶ ಪೂಜೆ, ಚಂಡಿಕಾ ಹವನ ಪ್ರಾರಂಭ, ಆಶ್ಲೇಷ ಬಲಿ ಮತ್ತು ಶ್ರೀ ವಾಸುಕೀ ನಾಗಬ್ರಹ್ಮ ದೇವರ ಪ್ರತಿಷ್ಠೆ, ನಾಗತಂಬಿಲ, ಹಾಗೂ ವರದಾಯಿನಿ ಶ್ರೀ ವ್ಯಾಘ್ರ ಚಾಮುಂಡಿ ಶ್ರೀ ರಕೇಶ್ವರಿ, ರಾಜಗುಳಿಗ ಸಾನಿಧ್ಯಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಬಳಿಕ ಶ್ರೀ ವ್ಯಾಘ್ರಚಾಮುಂಡಿ ಮೂಲ ಸಾನಿಧ್ಯದಿಂದ ಭಂಡಾರ ತೆಗೆದು ಸಾಂಪ್ರದಾಯಿಕ ಶೈಲಿಯಲ್ಲಿ ವಲಸರಿ ಹೊರಟು ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನೇಮೋತ್ಸವವು ಜರುಗಲಿರುವುದು. ನಂತರ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಶ್ರೀ ಓಂಶಕ್ತಿ ಆಚಿಜನೇಯ ಮಂತ್ರಾಲಯ, ಬೊಳುವಾರು, ಪುತ್ತೂರು ಇವರಿಂದ ಜಿಲ್ಲೆಯ ಪ್ರಖ್ಯಾತ ಮಹಿಳಾ ಯಕ್ಷಗಾನ ಭಾಗವತಿಕೆ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಸುಬ್ರಹ್ಮಣ್ಯ ಇವರ ಹಾಡುಗಾರಿಕೆಯೊಂದಿಗೆ ದಕ್ಷಯಜ್ಞ (ನಿರೀಶ್ವರ ಯಾಗ) ಎಂಬ ಪುರಾಣ ಪ್ರಸಂಗವನ್ನು ಮಂಡಳಿಯ ನಿರ್ದೇಶಕರಾದ ಶ್ರೀಯುತ ಭಾಸ್ಕರ ಬಾರ್ಯ ಅವರ ಸಂಯೋಜನೆಯಲ್ಲಿ ನಡೆಸಿಕೊಡಲಿರುವರು.