Saturday, November 23, 2024
ಪುತ್ತೂರು

ಕೃಷಿಗೆ ಸಾವಯುವ ಗೊಬ್ಬರದ ಉಪಯೋಗ ಉತ್ತಮ; ಗಣಪತಿ ಭಟ್‍ಎಕ್ಕಡ್ಕ-ಕಹಳೆ ನ್ಯೂಸ್

ಪುತ್ತೂರು : ರಾಸಯನಿಕ ಕ್ರಿಮಿನಾಶಕಗಳ ಉಪಯೋಗದಿಂದ ರೈತ ಸ್ನೇಹಿ ಪ್ರಾಣಿಗಳಾದ ಎರೆಹುಳುಗಳು ನಾಶ ಹೊಂದುವುದರ ಜೊತೆಗೆ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೃಷಿ ಚಟುವಟಿಕೆಗೆ ರಾಸಾಯನಿಕದ ಬದಲು ಹಟ್ಟಿಗೊಬ್ಬರ ಹಾಗೂ ಸೂಟುಮಣ್ಣಿನ್ನು ಉಪಯೋಗಿಸುವುದು ಉತ್ತಮ. ಸಾವಯುವ ಕೃಷಿಯಿಂದ ಅನೇಕರಿಗೆ ಉತ್ತಮ ಫಲ ದೊರೆತಿದೆ. ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸುವುದರಿಂದ ಸಮಯ ಹಾಗೂ ಶಕ್ತಿಯ ಉಳಿತಾಯವಾಗುತ್ತದೆ. ಕೃಷಿ ಉಪಯೋಗಿ ಸವಲತ್ತುಗಳನ್ನು ಎಲ್ಲರೂ ಉಪಯೋಗಿಸಿಕೊಳ್ಳುವುದರ ಮೂಲಕ ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕ ಗಣಪತಿ ಭಟ್‍ಎಕ್ಕಡ್ಕ ಹೇಳಿದರು. ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ‘ಜನ-ಮನ’ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿ ಶುಕ್ರವಾರ ಅವರು ಮಾತನಾಡಿದರು. ಮಳೆ ಕೊಯ್ಲಿನ ಸಹಕಾರದಿಂದ ಮಳೆ ನೀರನ್ನು ಸಂಗ್ರಹಿಸಿಡಬಹುದು. ಹಂಚಿನಿಂದ ಇಳಿಯುವ ನೀರನ್ನು ಭೂಮಿಗೆ ಇಂಗಿಸುವುದರಿಂದ ನೀರನ್ನು ಶೇಖರಿಸಲು ಸಾಧ್ಯ. ಹಟ್ಟಿ ಗೊಬ್ಬರದಿಂದ ಗೋಬರ್ ಗ್ಯಾಸ್ ನಿರ್ಮಾಣ ಸಾದ್ಯ. ಗೋಬರ್ ಗ್ಯಾಸ್‍ನ ಉಪಯೋಗದಿಂದ ಸೌದೆ ಅಥವಾ ಎಲ್‍ಪಿಜಿ ಅನಿಲದ ಅವಲಂಬನೆ ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ‘ಜನ-ಮನ’ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಜಯಪ್ರಕಾಶ್ ದುಗ್ಗಳ ಮಾತನಾಡಿ, ಪ್ರಗತಿಪರ ಕೃಷಿಕರ ಸಾಧನೆಗಳು ಯಾರಿಗೂ ತಿಳಿಯುತ್ತಿಲ್ಲ. ಪತ್ರಕರ್ತನಾಗುವವರು ಮುಂದೆ ಕೃಷಿ ಅಭಿವೃದ್ದಿಯ ಬಗ್ಗೆ ಸಮಾಜಕ್ಕೆ ಮಾಹಿತಿ ನೀಡಬೇಕು. ಸಾಮಾನ್ಯರಿಗೆ ಕೃಷಿಯ ಬಗ್ಗೆ ತಿಳಿಯುವಂತೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ವಿಭಾಗದ ಉಪನ್ಯಾಸಕ ಅಕ್ಷತ್ ಭಟ್, ಉಪನ್ಯಾಸಕಿಯರಾದ ಪ್ರಜ್ಞಾ ಬಾರ್ಯ, ಸೀಮಾ ಪೋನಡ್ಕ ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿ ಜಗದೀಶ್ ಜೆ.ಗಾಣಿಗ ಸ್ವಾಗತಿಸಿ, ವಿದ್ಯಾರ್ಥಿನಿ ಅರ್ಪಿತಾಕುಂದರ್ ವಂದಿಸಿದರು. ವಿದ್ಯಾರ್ಥಿನಿ ಪವಿತ್ರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.