ಇನ್‌ಲ್ಯಾಂಡ್ ಬಿಲ್ಡರ್ಸ್ ಆಯೋಜಿಸಿದ ಫೆಬ್ರವರಿ 8 ರಿಂದ ಫೆಬ್ರವರಿ 28ರವರೆಗಿನ ಪ್ರಾಪರ್ಟಿ-ಮೇಳ-2021, ಗ್ರಾಹಕರ ಅಭಿರುಚಿಗೆ ತಕ್ಕಂತೆ ಸುಂದರ ಮತ್ತು ಆಧುನಿಕ ಇಂಟೀರಿಯರ್ ಯೋಜನೆಗಳು ಇಲ್ಲಿದೆ-ಕಹಳೆ ನ್ಯೂಸ್
ಮಂಗಳೂರು: 20 ದಿನಗಳ ಪ್ರಾಪರ್ಟಿ-ಮೇಳ-2021 ಮಂಗಳೂರಿನ ನವಭಾರತ್ ವೃತ್ತ ಸಮೀಪದ ಇನ್‌ಲ್ಯಾಂಡ್ ಆರ್ನೇಟ್ ಇಲ್ಲಿ ನಡೆಯುತ್ತಿದೆ.
ಕರ್ನಾಟಕದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಇನ್‌ಲ್ಯಾಂಡ್ ಬಿಲ್ಡರ್ಸ್ ಆಯೋಜಿಸಿರುವ ಮೂರನೇ ವರ್ಷದ ಮೇಳಕ್ಕೆ ಜನತೆಯಿಂದ ಅಭೂತಪೂರ್ವ ಸ್ಪಂದನೆ ದೊರಕಿದೆ. ಫೆ. 8 ರಂದು ಈ ಪ್ರಾಪರ್ಟಿ ಮೇಳವನ್ನು ಮಂಗಳೂರಿನ ಜೋ ಗೊನ್ಸಾಲ್ವಿಸ್ ಹಾಗೂ ದೈಜಿವರ್ಲ್ಡ್ ಮೀಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದ್ದರು. ಇನ್‌ಲ್ಯಾಂಡ್ ಆಯೋಜನೆಗೊಳಿಸಿದ ಈ ಮೊದಲೇ ಅದ ಎರಡು ಮೇಳಗಳಂತೆಯೇ ಮೂರನೇ ಪ್ರಾಪರ್ಟಿ ಮೇಳವು ಅತ್ಯಂತ ಜನಪ್ರಿಯವಾಗಿ ಜನರ ಮನಸೂರೆಗೊಂಡಿದೆ. ಈ ಬಗ್ಗೆ ಮಾತನಾಡಿದ ಇನ್-ಲ್ಯಾಂಡ್ ಸಮೂಹದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾದ ಸಿರಾಜ್ ಅಹ್ಮದ್ “ಕೋವಿಡ್ ಸಾಂಕ್ರಾಮಿಕದಿ0ದಾಗಿ ಎಲ್ಲೆಡೆ ಇರುವ ನಿರಾಶಾದಾಯಕ ವಾತಾವರಣದ ನಡುವೆ ಈ ಬಾರಿ ಪ್ರಾಪರ್ಟಿ ಮೇಳ ನಡೆಸಬೇಕೇ ಅಥವಾ ಬೇಡವೇ ಎಂಬ ದೊಡ್ಡ ನಿರ್ಧಾರವನ್ನು ನಾವು ಕೈಗೊಳ್ಳಬೇಕಾಗಿತ್ತು. ಈ ಮೊದಲು ದೊರಕಿದ್ದ ಉತ್ತಮ ಸ್ಪಂದನೆಯನ್ನು ಗಮನಿಸಿ ನಾವು ಈ ಕಾರ್ಯಕ್ರಮ ಆಯೋಜಿಸುವ ನಿರ್ಧಾರ ಕೈಗೊಂಡೆವು. ಈಗ ಸರಿಯಾದ ನಿರ್ಧಾರವನ್ನೇ ಕೈಗೊಂಡೆವು ಎಂಬ ಸಮಾಧಾನ ಈಗ ನಮಗಿದೆ” ಎಂದು ಹೇಳಿ, “ಈ ಮೇಳದ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ ನಾವು ಭಾರೀ ರಿಯಾಯಿತಿಗಳನ್ನು ನೀಡುತ್ತಿದ್ದು, ಉತ್ತಮವಾದ ವಿವಿಧ ಯೋಜನೆಗಳನ್ನು ನಾವು ಆಫರ್ ಮಾಡುತ್ತಿದ್ದೇವೆ. ಹಾಗೆಯೇ ಇನ್-ಲ್ಯಾಂಡ್ ಕಟ್ಟಡಗಳು ಬೆಂಗಳೂರು, ಮಂಗಳೂರು, ಉಳ್ಳಾಲ ಹಾಗೂ ಪುತ್ತೂರಿನಲ್ಲಿವೆ. ರೂ 35 ಲಕ್ಷ ಮೇಲ್ಪಟ್ಟು ಫ್ಲ್ಯಾಟುಗಳು ಲಭ್ಯ” ಎಂದು ಅವರು ಹೇಳಿದರು. ಇನ್-ಲ್ಯಾಂಡ್ ಸಮೂಹದ ನಿರ್ದೇಶಕರಾದ ಮೆರಾಜ್ ಯೂಸುಫ್ ಸಿರಾಜ್ ಮಾತನಾಡಿ, 20 ದಿನಗಳ ಮೇಳ ಆಯೋಜಿಸಿದ್ದೇವೆ ಹಾಗೂ ನಮ್ಮ ಕಚೇರಿಯಲ್ಲಿಯೇ ಅದನ್ನು ನಡೆಸುತ್ತಿದ್ದೇವೆ. ಇದರಿಂದಾಗಿ ಗ್ರಾಹಕರಿಗೆ ನಮ್ಮ ಕಚೇರಿಗೆ ಭೇಟಿ ನೀಡಲು, ವಿವಿಧ ಯೋಜನೆ ಪ್ರದೇಶಗಳಿಗೆ ಭೇಟಿ ನೀಡಲು, ತಮ್ಮ ಆದ್ಯತೆಗಳ ಕುರಿತು ಚರ್ಚಿಸಲು, ಗೃಹ ಸಾಲ ಕುರಿತಂತೆ ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಲು ಹಾಗೂ ನಂತರ ತಮ್ಮ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತದೆ ಎಂದು ಹೇಳುತ್ತಾ, ಒಂದು ಪ್ರಯೋಜನಕಾರಿ ಅಂಶವೆ0ದರೆ ಗ್ರಾಹಕರು ನಿರ್ಮಾಣ ಅವಧಿಯುದ್ದಕ್ಕೂ ಕಂತಿನ ಮೂಲಕ ಮೊತ್ತವನ್ನು ಪಾವತಿಸಬಹುದಾಗಿದೆ,” ಎಂದು ಅವರು ವಿವರಿಸಿದರು. “ಗ್ರಾಹಕರು ನಮ್ಮಿಂದ ಖರೀದಿಸಲು ಮುಖ್ಯ ಕಾರಣ ನಾವು ಆಫರ್ ಮಾಡುವ ಗುಣಮಟ್ಟದ ಯೋಜನೆಗಳು. ನಮ್ಮ ಹಲವು ಗ್ರಾಹಕರು, ಅವರ ಸಂಬ0ಧಿಗಳು ಹಾಗೂ ಸ್ನೇಹಿತರು ಕೂಡ ನಮ್ಮೊಂದಿಗೆ ಕಳೆದ 15-20 ವರ್ಷಗಳಿಂದ ಇದ್ದು, ತಮ್ಮ ಎರಡನೇ ಮನೆ ಹಾಗೂ ವಾಣಿಜ್ಯ ಆಸ್ತಿಗಳನ್ನೂ ನಮ್ಮಿಂದ ಖರೀದಿಸುತ್ತಿದ್ಧಾರೆ. ನಮ್ಮ ಗುಣಮಟ್ಟ ಪ್ರಕ್ರಿಯೆ ಐಎಸ್‌ಒ ಪ್ರಮಾಣೀಕೃತವಾಗಿದ್ದು ಇದರಿಂದ ಗ್ರಾಹಕರಿಗೆ ಲಾಭವಿದೆ. ನಮ್ಮಲ್ಲಿ ವಿಶಾಲವಾದ ಇನ್-ಹೌಸ್ ಡಿಸೈನ್ ಸ್ಟುಡಿಯೋ ಕೂಡ ಇದ್ದು ಗ್ರಾಹಕರ ಅಭಿರುಚಿಗೆ ತಕ್ಕಂತೆ ಸುಂದರ ಮತ್ತು ಆಧುನಿಕ ಇಂಟೀರಿಯರ್ ಯೋಜನೆಗಳೂ ಲಭ್ಯವಿದೆ. ಇದು ನಮ್ಮಲ್ಲಿರುವ ಒಂದು ಪೂರಕ ಅಂಶ ಹಾಗೂ ಗ್ರಾಹಕರಿಗೆ ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗಲಿದೆ” ಎಂದು ಅವರು ವಿವರಿಸಿದರು. ಇನ್-ಲ್ಯಾಂಡ್ ಕೂಡ ಇತ್ತೀಚೆಗೆ ಅತ್ಯಾಧುನಿಕ ವಾಣಿಜ್ಯ ಪ್ರಾಜೆಕ್ಟ್ -ಇನ್‌ಲ್ಯಾಂಡ್ ಬಿಸಿನೆಸ್ ಪಾರ್ಕ್ ಅನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಭಾರತ್ ಮಾಲ್ ಸಮೀಪ ಚಾಲನೆ ನೀಡಿದೆ. ಈ ಪ್ರಾಪರ್ಟಿ ಮೇಳ ಇನ್ನೂ ಹತ್ತು ದಿನ ಮುಂದುವರಿಯಲಿದ್ದು ಈಗಾಗಲೇ ಹಲವು ಮಂದಿ ಖರೀದಿಸಲು ಮುಂದೆ ಬಂದಿದ್ದಾರೆ ಹಾಗೂ ಹಲವು ಯೋಜನೆಗಳು ಅತಿ ಶೀಘ್ರದಲ್ಲಿಯೇ ಸೋಲ್ಡ್ ಔಟ್ ಆಗುತ್ತಿದೆ. ಪ್ರಾಪರ್ಟಿ ಮೇಳ ಸ್ಥಳ : ೩ನೇ ಅಂತಸ್ತು, ಇನ್‌ಲ್ಯಾಂಡ್, ಆರ್ನೇಟ್, ನವಭಾರತ್ ವೃತ್ತ, ಮಂಗಳೂರು, ಫೆಬ್ರವರಿ 8 ರಿಂದ ಫೆಬ್ರವರಿ 28, ಸಮಯ : ಬೆಳಿಗ್ಗೆ 9.30ರಿಂದ ಸಂಜೆ 7.30. ದೂರವಾಣಿ : 9972089099, 9972014055