Sunday, November 24, 2024
ಪುತ್ತೂರು

ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಲಾಂ: ಅನಿತಾ ಕಾಮತ್

ಪುತ್ತೂರು: ಕೊರೊನ ಸಮಯದಲ್ಲಿ ಸಂಚರಿಸುವುದಕ್ಕೆ ಕಷ್ಟದ ಪರಿಸ್ಥಿತಿ ಇದ್ದಾಗಲೂ ಕೆಲವು ಬಸ್ಸುಗಳ ಓಡಾಟಕ್ಕೆ ವ್ಯವಸ್ಥೆ ಮಾಡಿರುವುದು ಜನರಿಗೆ ಸಹಕಾರಿಯಾಗಿದೆ.

ಕೆಲವು ಸಾರಿಗೆ ಸಿಬ್ಬಂದಿಗಳು ಮಾನವೀಯತೆ ಮೆರೆದು ತಮ್ಮ ಕೆಲಸ ನಿರ್ವಹಿಸುವವರ ಮಧ್ಯೆ ಮಾನವೀಯತೆ ಮರೆತವರು ಇದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಲಾಂ. ಬಸ್ಸು ಹಾಳಾದಾಗ ಕೆಲವು ಸಂಧರ್ಭದಲ್ಲಿ ಜಾಗರೂಕತೆಯಲ್ಲಿ ಪ್ರಯಾಣಿಕರನ್ನು ಮನೆ ತಲುಪಿಸುವ ಕೆಲಸ ಮಾಡುತ್ತಾರೆ. ಈ ಬಸ್ಸಿನ ಪ್ರಯಾಣದಲ್ಲಿ ಆಗುವ ಅನುಭವಗಳು ಅನೇಕ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ರಾಜ್ಯಶಾಸ್ತç ವಿಭಾಗದ ಉಪನ್ಯಾಸಕಿ ಅನಿತಾ ಕಾಮತ್ ಹೇಳಿದರು. ಕಾಲೇಜಿನ ಐಕ್ಯೂಎಸಿ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತೃತೀಯ ಬಿಎ ಪತ್ರೀಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಗುರುವಾರ ಅವರು ಮಾತನಾಡಿದರು. ‘ಸರ್ಕಾರಿ ಬಸ್ಸೆಂಬ ರಥವನ್ನೇರಿʼ ಎಂಬ ವಿಷಯದ ಕುರಿತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಚರಿಷ್ಮಾ ಡಿ.ಜಿ, ನಿರಂಜನ್, ಹರ್ಷಿಣಿ ಯು, ನಮನ್ ಶೆಟ್ಟಿ, ತನುಶ್ರೀ, ಸಹನಾ, ಶ್ವೇತಾ, ಶುಭ್ರ ಪುತ್ರಕಳ, ಕಾರ್ತಿಕ್ ಪೈ, ವಿದ್ಯಾಲಕ್ಮೀ, ಗೌತಮ್, ಕೃತಿ, ಮಂಜುನಾಥ್, ಶಶಿಧರ್, ಶ್ರೀರಾಮ, ಕೃತಿಕಾ, ನಿರೀಕ್ಷಾ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿ ಮಂಜುನಾಥ್ ವಾರದ ಉತ್ತಮ ಮಾತುಗಾರನಾಗಿ ಮತ್ತು ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉತ್ತಮ ಮಾತುಗಾರರ ತಂಡವಾಗಿ ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸೀಮಾ ಪೋನಡ್ಕ, ಹಾಗೂ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಸೌಜನ್ಯ ಬಿ.ಎಂ. ಕೆಯ್ಯೂರು ಉಪಸ್ಥಿತರಿದ್ದರು. ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ದೀಕ್ಷಿತ್ ಸ್ವಾಗತಿಸಿ, ವಿದ್ಯಾರ್ಥಿನಿ ಅನುಷಾ ವಂದಿಸಿದರು. ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು