Sunday, January 19, 2025
ಸುದ್ದಿ

Big News : ಕೈರಂಗಳ ಗೋಕಳ್ಳತನ ಪ್ರಕರಣ ; ಇಬ್ಬರು ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೋಲಿಸರು! – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಿಂದ ಗೋವು ಕಳವಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ಗ್ರಾಮದ ಮೋನಚ್ಚ ಯಾನೆ ಅಹಮ್ಮದ್‌ ಕುಂಞಿ ಮತ್ತು ಮೊಂಟೆಪದವು ಮರಿಕಳ ಬಶೀರ್‌ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ. 29ರಂದು ಅಮೃತಧಾರಾ ಗೋಶಾಲೆಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳು ಗೇಟಿಗೆ ಹಾಕಿದ್ದ ಬೀಗ ಮುರಿದು ಒಂದು ಹಸುವನ್ನು ಕಾರಿನಲ್ಲಿ ಹಾಕಿ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ರಾಜಾರಾಂ ಭಟ್‌ ಅವರು ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಣಾಜೆ ಪೊಲೀಸ್‌ ಇನ್ಸ್‌ಸ್ಪೆಕ್ಟರ್‌ ಪ್ರಕಾಶ್‌ ಬಿ.ಎಸ್‌., ಪಿಎಸ್‌ಐ ಪೀರು ಪವಾರ್‌, ಪಿಎಸ್‌ಐ ಶಂಕರ್‌ ನಾಯರಿ ಮತ್ತು ಸಿಬಂದಿ, ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬಂದಿ ಹಾಗೂ ಸಿಸಿಬಿ ಇನ್ಸ್‌ಪೆಕ್ಟರ್‌ ಶಾಂತಾರಾಂ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.