Sunday, January 19, 2025
ಕಾಸರಗೋಡುಬದಿಯಡ್ಕಸುದ್ದಿ

ಚುನಾವಣೆ ಸಂದರ್ಭದಲ್ಲೂ ಪರವಾನಿಗೆಯುಳ್ಳ ನಾಗರಿಕರ ಕೋವಿಗಳನ್ನು ಠಾಣೆಯಲ್ಲಿ ಇಡಬೇಕಿಲ್ಲ ; ಕೇರಳ ಹೈಕೋರ್ಟ್ ಮಹತ್ವದ ತೀರ್ಪು – ಕಹಳೆ ನ್ಯೂಸ್

ಕಾಸರಗೋಡು: ನಾಗರಿಕರ ವಶದಲ್ಲಿರುವ ಪರವಾನಿಗೆಯುಳ್ಳ ಕೋವಿಗಳನ್ನು ಚುನಾವಣೆಯ ಸಂದರ್ಭದಲ್ಲೂ ಪೊಲೀಸ್ ಠಾಣೆಗಳಲ್ಲಿ ಶೇಖರಿಸಿ ಇಡಲು ಅವಕಾಶವಿಲ್ಲ ಎಂದು ಕೇರಳ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಕಾಸರಗೋಡಿನ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಅವರು ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಾಲಯ ಈ ತೀರ್ಪು ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣದ ವಿವರ:
ಇತ್ತೀಚಿನ ಪಂಚಾಯತ್ ಚುನಾವಣೆ ವೇಳೆ, ಕಾಸರಗೋಡು ಜಿಲ್ಲಾಧಿಕಾರಿಗಳ ಆದೇಶದಂತೆ ಬದಿಯಡ್ಕ ಠಾಣಾ ಪೊಲೀಸರು, ಅರ್ಜಿದಾರರಾದ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಅವರ ಪರವಾನಿಗೆ ಸಹಿತ ಕೋವಿಯನ್ನು ಠಾಣೆಯಲ್ಲಿ ತಂದಿರಿಸುವಂತೆ ಆದೇಶಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆದೇಶವನ್ನು ಪ್ರಶ್ನಿಸಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಕಾಸರಗೋಡಿನ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಕೇರಳ ಹೈಕೋರ್ಟಲ್ಲಿ ಕಾಸರಗೋಡು ಜಿಲ್ಲಾಧಿಕಾರಿ, ಎಡಿಎಂ ಕಾಸರಗೋಡು, ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಹಾಗೂ ಎಲೆಕ್ಷನ್ ಕಮಿಷನರ್‌ಗಳನ್ನು ಪ್ರತಿವಾದಿಗಳನ್ನಾಗಿಸಿ ರಿಟ್ ಅರ್ಜಿಯಲ್ಲಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ, ಚುನಾವಣೆಯ ಸಂದರ್ಭದಲ್ಲಿ ಪರವಾನಿಗೆ ಹೊಂದಿದ ಬಂದೂಕುಗಳನ್ನು ಪೋಲಿಸ್ ಠಾಣೆಯಲ್ಲಿ ಶೇಖರಿಸಿ ಇಡುವ ಅಧಿಕಾರ ಪೊಲೀಸ್ ಅಧಿಕಾರಿಗಳಿಲ್ಲ ಎಂದು ತೀರ್ಪು ನೀಡಿತು.

01.09.2009 ಚುನಾವಣಾ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯ ಪ್ರಕಾರ ಜಿಲ್ಲಾ ದಂಡಾಧಿಕಾರಿ ಸ್ಕ್ರೀನಿಂಗ್ ಕಮಿಟಿ ರೂಪೀಕರಿಸಿ ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಪರವಾನಿಗೆದಾರರ ಕೋವಿಗಳನ್ನು ಮಾತ್ರವೇ ಸುಸಜ್ಜಿತ ಚುನಾವಣೆ ನಡೆಸುವ ಅಂಗವಾಗಿ ಶೇಖರಿಸಲು ಅನುಮತಿ ಇರುತ್ತದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಎರಡು ದಿನಗಳೊಳಗೆ ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು ಅವರ ಕೋವಿಯನ್ನು ಹಸ್ತಾಂತರಿಸಬೇಕೆಂದು ಬದಿಯಡ್ಕ ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದೆ.