Sunday, January 19, 2025
ಸುದ್ದಿ

ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆ ದಕ್ಷಿಣ ಕನ್ನಡ ಪ್ರವೇಶಕ್ಕೆ 4 ಕಡೆ ಮಾತ್ರ ಅವಕಾಶ– ಕಹಳೆ ನ್ಯೂಸ್

ಮಂಗಳೂರು: ಕೇರಳದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳು ಕೇರಳದಿಂದ ದಕ್ಷಿಣ ಕನ್ನಡಕ್ಕೆ ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ ,ಸುಳ್ಯದ ಜಾಲ್ಸೂರು ಹಾಗೂ ಪುತ್ತೂರಿನ ನೆಟ್ಟಣಿಗೆ ಮುಡ್ನೂರು ಹಾಗೂ ಮೇನಾಲದಿಂದ ಮಾತ್ರ ಪ್ರವೇಶಕ್ಕೆ ಅನುಕೂಲ ನೀಡಲಾಗಿದೆ. ಆಗಮಿಸುವ ಹಾಗೂ ನಿರ್ಗಮಿಸುವ ನಾಲ್ಕು ಗಡಿ ಭಾಗದಲ್ಲಿ ಮಾತ್ರ ಪ್ರವೇಶ ನೀಡಿ ಉಳಿದ ಭಾಗದಿಂದ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.ಈ ಭಾಗದಲ್ಲಿ ಬರುವಾಗ ಪ್ರಯಾಣಿಕರು ಆರ್‌ಟಿಪಿಸಿಆರ್ ‌ಪ್ರಮಾಣ ಪತ್ರ ಕೈಯಲ್ಲಿ ಹಿಡಿದುಕೊಂಡು ಬರಬೇಕು. ತಪಾಸಣೆ ವೇಳೆ ಇದನ್ನು ತೋರಿಸುವ ಹಾಗೂ ಸಂದೇಹ ಬಂದಾಗ ಇಲ್ಲಿ ಕೂಡ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಕೇರಳದಿಂದ ಬರುವ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಕೊರೊನಾ ಪರೀಕ್ಷೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯಿಂದ ಎರಡು ತಂಡಗಳು ಕಾರ್ಯನಿರ್ವಹಣೆ ಮಾಡಲಿದೆ.ಬೆಳಗ್ಗೆ 8 ರಿಂದ 1 ಹಾಗೂ 1 ರಿಂದ 5 ರವರೆಗೆ ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಲಪಾಡಿಯ ಚೆಕ್‌ಪೋಸ್ಟ್‌ನಲ್ಲಿ ಕೇರಳದಿಂದ ಬರುವ ಪ್ರಯಾಣಿಕರನ್ನು ರ‍್ಯಾಂಡಂ ಆಗಿ ರ‍್ಯಾಟ್‌ ಹಾಗೂ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು