Recent Posts

Sunday, April 13, 2025
ಸುದ್ದಿ

30 ಲಕ್ಷ ವೆಚ್ಚದಲ್ಲಿ 2 ನೇ ವಾರ್ಡಿನಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ-ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 2 ರಲ್ಲಿ ಹಾದುಹೋಗಿರುವ ರಾಜಕಾಲುವೆಗೆ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ 25 ಲಕ್ಷ ರೂಪಾಯಿ ಅನುದಾನದಲ್ಲಿ ತಡೆಗೋಡೆ ಹಾಗೂ ಪಾಲಿಕೆ ಸಾಮಾನ್ಯ ನಿಧಿಯಿಂದ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭಾನುವಾರ ಲೋಕಾರ್ಪಣೆಗೊಳಿಸಿದರು.


ಈ ಸಂದರ್ಭದಲ್ಲಿ ಪಾಲಿಕೆ ಸ್ಥಳೀಯ ಕಾರ್ಪೋರೇಟರ್ ಶ್ವೇತಾ ಪೂಜಾರಿ ಬೂತ್ ಅಧ್ಯಕ್ಷರಾದ ಸಜಿತ್ ರಾಜ್ , ಜಗನ್ನಾಥ ಶೆಟ್ಟಿ, ವಿಠ್ಠಲ್ ದಾಸ್, ಶಕ್ತಿಕೇಂದ್ರ ಪ್ರಮುಖ್ ಸುರೇಂದ್ರ ಸುವರ್ಣ ಹಾಗೂ ಜಯಂತ್,ಸಹ ಪ್ರಮುಖ್ ಪ್ರಹ್ಲಾದ್ ಶೆಟ್ಟಿ.ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ ,ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ರಾಘವೇಂದ್ರ ಶೆಣೈ ,ಪ್ರಶಾಂತ್ ಶೆಟ್ಟಿ ,ಸುಧಾಕರ್ ಸುರತ್ಕಲ್, ದಿನಕರ್ ಇಡ್ಯಾ ,ಕೇಸರಿ ಫ್ರೆಂಡ್ಸ್ ಹಾಗೂ
ಶ್ರೀ ರಾಮಾಂಜನೇಯ ಸೇವಾ ಮಂದಿರದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಕಾರ್ಯಕರ್ತರು,ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ