Sunday, January 19, 2025
ಹಾಸನ

ತಾಯಿಯನ್ನು ರಕ್ಷಿಸಲು ಚಿರತೆಯೊಂದಿಗೆ ಹೋರಾಡಿದ ಯುವಕ-ಕಹಳೆ ನ್ಯೂಸ್

ಹಾಸನ : ಅರಸೀಕೆರೆಯ ಬೈರಗೊಂಡನಹಳ್ಳಿಯ ಬೋವಿ ಕಾಲೋನಿಯಲ್ಲಿ ಯುವಕನೋರ್ವ ತನ್ನ ತಾಯಿಯನ್ನು ರಕ್ಷಿಸಲು ಚಿರತೆಯೊಂದಿಗೆ ಹೋರಾಡಿ ಗೆದ್ದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಮ್ಮ ಎಂಬವರ ಪುತ್ರ ಕಿರಣ್ ತನ್ನ ತಾಯಿಯನ್ನು ಚಿರತೆಯಿಂದ ಕಾಪಾಡಿದ ರಿಯಲ್ ಹೀರೋ. ಚಂದ್ರಮ್ಮ ಅವರು ತಮ್ಮ ಜಮೀನಿಗೆ ಹೋಗುತ್ತಿದ್ದ ವೇಳೆ ಏಕಾಏಕಿ ಅವರ ಮೇಲೆ ಚಿರತೆ ದಾಳಿ ಮಾಡಿದೆ,. ತಾಯಿಯ ಮೇಲೆ ಚಿರತೆ ದಾಳಿ ಮಾಡಿರುವುನ್ನು ನೋಡಿದ ಕಿರಣ್ ತಕ್ಷಣವೇ ಚಿರತೆಯ ಕುತ್ತಿಗೆಯನ್ನು ಕೈಯಿಂದ ಲಾಕ್ ಮಾಡಿದ್ದಾರೆ. ಹೀಗೆ ಸುಮಾರು 15 ನಿಮಿಷಗಳ ಕಾಲ ಚಿರತೆಯೊಂದಿಗೆ ಭೀಕರ ಕಾಳಗ ನಡೆದಿದ್ದು, ಕೊನೆಗೆ ಚಿರತೆ ಏನೂ ಮಾಡಲು ಸಾಧ್ಯವಾಗದೇ ಸ್ಥಳದಿಂದ ಪರಾರಿಯಾಗಿದೆ. ಚಿರತೆ ದಾಳಿಯಿಂದ ತಾಯಿ ಚಂದ್ರಮ್ಮ ಹಾಗೂ ಮಗ ಕಿರಣ್ ಇಬ್ಬರಿಗೂ ಗಾಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಭೀತರಾಗಿದ್ದು, ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯುವಂತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು