Sunday, January 19, 2025
ಹೆಚ್ಚಿನ ಸುದ್ದಿ

ಫೆಬ್ರವರಿ 25ರಂದು ಬೆಳ್ತಂಗಡಿಯ ಪೆಲತ್ತಿಮಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ “ಅಶ್ವತ್ಥಕಟ್ಟೆ” ಅಶ್ವತ್ಥೋಪನಯನ ಹಾಗೂ ವಿವಾಹ ಸಮಾರಂಭ – ಕಹಳೆ ನ್ಯೂಸ್

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಪೆಲತ್ತಿಮಾರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಪೆಲತ್ತಿಮಾರು, ಬಂದಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂದಾರು ಒಕ್ಕೂಟ ಇದರ ಒಗ್ಗೂಡುವಿಕೆಯೊಂದಿಗೆ ಪರಮಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಶ್ರೀ ಸೀತಾರಾಮ ತಂತ್ರಿಯವರ ಪೌರೋಹಿತ್ವದಲ್ಲಿ ಮತ್ತು ಶ್ರೀಮತಿ ಮತ್ತು ಶ್ರೀ ಉಮೇಶ್ ಪಡ್ಡಿಲ್ಲಾಯರ ನೇತೃತ್ವದಲ್ಲಿ ದಿನಾಂಕ 25-02-2021ನೇ ಗುರುವಾರ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ, ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ, ಹಚ್ಚಹಸಿರಿನಿಂದ ಸುಂದರವಾಗಿ ಬೆಳೆದು ನಿಂತ ಅಶ್ವತ್ಥ ವೃಕ್ಷದ ಸುತ್ತ ನೂತನವಾಗಿ ನಿರ್ಮಿಸಿರುವ “ಅಶ್ವತ್ಥಕಟ್ಟೆ” ಇದರ ಧಾರ್ಮಿಕ ವಿಧಿ-ವಿಧಾನವಾದ ಅಶ್ವತ್ಥೋಪನಯನ ಹಾಗೂ ವಿವಾಹ ಸಮಾರಂಭ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು