Recent Posts

Sunday, January 19, 2025
ಹೆಚ್ಚಿನ ಸುದ್ದಿ

ತುಮಕೂರು ಜಿಲ್ಲೆ ಶಿರಾ ಮೂಲದ ಜೆನೀಶ್ ಎಂಬ ಮಗುವಿನ ಚಿಕಿತ್ಸೆಗೆ ರೂ 40. ಸಾವಿರದಷ್ಟು ಹಣವನ್ನು ಸಂಗ್ರಹಿಸಿ ಅವರ ಪೋಷಕರಿಗೆ ತಲುಪಿಸಿದ ಸಂಡೂರಿನ ಯುವಕರು-ಕಹಳೆ ನ್ಯೂಸ್

ಸಂಡೂರು : ತುಮಕೂರು ಜಿಲ್ಲೆ ಶಿರಾ ಮೂಲದ ಜೆನೀಶ್ ಎಂಬ ಹಸುಗೂಸು ಸ್ಪೈನಲ್ ಮಸ್ಕುಲರ್ ಆಟ್ರೋಫಿ ಎಂಬ ಕಾಯಿಲೆಗೆ ತುತ್ತಾಗಿತ್ತು. ಈ ಬಗ್ಗೆ ಆ ಮಗುವಿನ ಪೋಷಕರು ಆಘಾತಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕಿತ್ಸೆಗೆ ಸರಿ ಸುಮಾರು ಹದಿನಾರು ಕೋಟಿ ವೆಚ್ಚ ತಗುಲುವುದು ಎಂದು ವೈದ್ಯರು ತಿಳಿಸಿದಾಗ ಪೋಷಕರ ಜಂಘಾಬಲವೇ ಕುಗ್ಗಿಹೋಗಿತ್ತು. ಈ ಸುದ್ದಿ ಮಾದ್ಯಮಗಳಲ್ಲಿ ಭಿತ್ತರಗೊಂಡ ನಂತರ ಇಡೀ ರಾಜ್ಯವೇ ಮರುಗಿತ್ತು.

ಮಗುವಿನ ಚಿಕಿತ್ಸೆಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಲು ಮುಂದಾದರು. ಪೋನ್ ಪೇ , ಗೂಗಲ್ ಪೇ , ಹಾಗೂ ಬೇರೆ ಬೇರೆ ವಿಧಾನಗಳಲ್ಲಿ ಆ ಬಡ ಕುಟುಂಬಕ್ಕೆ ನೆರವಾಗಿ ಮಗುವನ್ನ ಉಳಿಸಲು ಎಲ್ಲರೂ ಕೈ ಜೋಡಿಸಿದ್ದಾರೆ.

ಎಲ್ಲರ ಪ್ರಯತ್ನದಿಂದಾಗಿ ಇದೀಗ ಪೋಷಕರ ಬಳಿ ಐದು ಕೋಟಿ ಅರವತ್ತು ಲಕ್ಷ ಸಂಗ್ರಹವಾಗಿದೆ. ಇನ್ನೂ ಈ ಸುದ್ದಿ ತಿಳಿಯಿತ್ತಿದ್ದಂತೆ ಸಂಡೂರಿನ ಯುವಕರೂ ಕೂಡಾ ತಮ್ಮ ಕೈಲಾದ ಸಹಾಯ ಮಾಡಲು ಮುಂದೆ ಬಂದಿದ್ರು. ಸಂಡೂರಿನ ಬಿ. ಮುಂಡ್ರಿಗಿ ನಾಗರಾಜ್ ಅಭಿಮಾನಿಗಳ ಬಳಗದ ರಾಜೇಶ್ ಹೆಗಡೆ ನೇತೃತ್ವದಲ್ಲಿ ಪಟ್ಟಣದ ವಿವಿಧೆಡೆ ಖುದ್ದಾಗಿ ಹೋಗಿ ನಿಧಿ ಸಂಗ್ರಹಿಸಿದ್ದಾರೆ.

ಈ ಯುವಕರ ತಂಡ ಒಟ್ಟು ರೂ 40. ಸಾವಿರದಷ್ಟು ಹಣವನ್ನು ಸಂಗ್ರಹಿಸಿ ಅವರ ಪೋಷಕರಿಗೆ ತಲುಪಿಸಿದ್ದಾರೆ. ಮಗುವಿನ ಚಿಕಿತ್ಸೆ ವೆಚ್ಚಕ್ಕೆ ಸಹಕರಿಸಿದ ಸಂಡೂರಿನ ಸಮಸ್ಥ ಜನತೆಗೆ ರಾಜೇಶ್ ಹಾಗೂ ತಂಡದ ಯುವಕರಾದ ಯಲ್ಲಪ್ಪ , ರವಿ , ಸೀನಾ , ಪವನ್ ಕುಮಾರ್ , ಮಣಿಕಂಠ , ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.