Sunday, November 24, 2024
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ‘ಭವಿಷ್’ ಘಟಕ ಉದ್ಘಾಟನೆ, ವಿದ್ಯಾರ್ಥಿಗಳು ಆಶಾಭಾವನೆಯಿಂದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕು ; ಬಿ.ವಿ ಶಗ್ರಿತ್ತಾಯ-ಕಹಳೆ ನ್ಯೂಸ್

ಪುತ್ತೂರು : ಮಕ್ಕಳಿಗೆ ವಿವಿಧ ರೀತಿಯ ಕೌಶಲ್ಯವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ವಿದ್ಯಾರ್ಥಿಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲು ಇಂತಹ ಕಾರ್ಯಕ್ರಮ ಪ್ರೇರಣೆ ನೀಡುತ್ತದೆ. ಜೀವನಕ್ಕೆ ಬೇಕಾದ ಶಿಕ್ಷಣ ಇಂದು ದೊರೆಯುತ್ತಿಲ್ಲ, ಆ ಕಾರಣಕ್ಕೆ ಸಮಸ್ಯೆಗಳನ್ನು ಪರಿಹರಿಸಲು ತಾಳ್ಮೆ ಇಲ್ಲದ ಪರಿಸ್ಥಿತಿ ಉದ್ಭವವಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಶಿಕ್ಷಕ ಬಾಳಿಲ ವಿದ್ಯಾಬೋಧಿನಿ ಫ್ರೌಢ ಶಾಲೆಯ ನಿವೃತ ಮುಖ್ಯೋಪಾಧ್ಯಾಯ ಬಿ.ವಿ. ಶಗ್ರಿತ್ತಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಕಾಲೇಜಿನ ಭವಿಷ್ ಘಟಕವನ್ನು ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು. ವಿಧ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ವರ್ಧೆಗಳನ್ನು ಏರ್ಪಡಿಸಿ ಬಹುಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು, ಜೊತೆಗೆ ಕೆಲವು ಕ್ಷೇತ್ರದಲ್ಲಿ ಬದಲಾವಣೆಯನ್ನು ತರಬೇಕು. ಪಠ್ಯ ವಿಷಯದಲ್ಲಿ ಮಾತ್ರವಲ್ಲದೆ ಇತರ ಚಟುವಟಿಕೆಗಳಲ್ಲಿಯು ಭಾಗವಹಿಸಲು ಪ್ರೇರಣೆ ನೀಡಬೇಕು, ಮಕ್ಕಳಿಗೆ ಶಾಲೆಯಲ್ಲಿ ಮತ್ತು ಮನೆಯಲ್ಲಿ ಬೇರೆ ರೀತಿಯ ಶಿಕ್ಷಣ ಲಭಿಸುತ್ತದೆ. ಜೀವನದಲ್ಲಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಅದ್ಯಾಪಕರ ವೃತ್ತಿ ಶ್ರೇಷ್ಠವಾದದ್ದು, ಆ ಕ್ಷೇತ್ರಕ್ಕೆ ಸಂಬಂದಿಸಿದ ಭವಿಷ್ ಕಾರ್ಯಕ್ರಮ ಉನ್ನತ ಮಟ್ಟದಾಗಿದೆ. ಹಾಗೆ ವಿಭಿನ್ನ ರೀತಿಯಲ್ಲಿ ಯೋಚಿಸಿ ಪ್ರಯತ್ನ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ.

ಅವಕಾಶಗಳು ಬಂದಾಗ ಬಳಸಿಕೊಳ್ಳಬೇಕು. ಸಮಯದ ಸರಿಯಾದ ಪರಿಪಾಲನೆ ಮುಂದಿನ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ ಭವಿಷ್ಯದಲ್ಲಿ ಶಿಕ್ಷಕರಾಗಬೇಕು ಎಂಬ ಗುರಿ ಇರುವವರಿಗೆ ಇದು ಒಳ್ಳೆಯ ಚಟುವಟಿಕೆ ಮತ್ತು ಒಳ್ಳೆಯ ಪಾವಿತ್ರ್ಯತೆ ಇರುವ ಘಟಕ. ಗುರು-ಶಿಷ್ಯರ ನಡುವಿನ ಸಂಬಂಧ ಮಹತ್ವಪೂರ್ಣವಾದದ್ದು, ಅದು ಗೌರವದ ಕೆಲಸ. ಉತ್ತಮ ಪ್ರಜೆಯನ್ನು ತಯಾರು ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದುದು ಎಂದು ಹೇಳಿದರು. ವಿದ್ಯಾರ್ಥಿನಿ ಪೌರ್ಣಿಕ ಮತ್ತು ಪ್ರಿಯಾ ಭಟ್ ಪ್ರಾರ್ಥಿಸಿದರು. ಭವಿಷ್ ಘಟಕದ ಸಂಯೋಜಕಿ, ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ವಿಜಯಲಕ್ಷೀ ಪ್ರಾಸ್ತಾವಿಸಿ, ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಲಾವಣ್ಯ ಸಿ.ಕೆ ವಂದಿಸಿ, ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು.