Monday, January 27, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಅರೆಬಿಕ್ ಶಾಲಾ ಶಿಕ್ಷಕನೋರ್ವನಿಂದ ಮೈ ಮುಟ್ಟಿ ಕಿರುಕುಳ-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಅರೆಬಿಕ್ ಶಾಲಾ ಶಿಕ್ಷಕನೋರ್ವ ಮೈ ಮುಟ್ಟಿ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಿಗ್ಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯದ ಅರೆಬಿಕ್ ಶಾಲಾ ಶಿಕ್ಷಕ  32 ವರ್ಷದ ಮುಹಮ್ಮದ್ ಸೈಫುಲ್ಲಾ  ಬಂಧಿತ ಆರೋಪಿ. ಈತ ಮೂಲತ: ಚಿಕ್ಕಮಗಳೂರಿನವನು. ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಚಲಿಸುತ್ತಿದ್ದ ಬಸ್ಸಿನಲ್ಲಿ ಕೃತ್ಯ ನಡೆದಿದ್ದೂ ವಿಷಯ ತಿಳಿದ ಬಸ್ಸಿನ ಕಾರ್ಯ ನಿರ್ವಾಹಕರು ಬಸ್ಸನ್ನು ಠಾಣೆಗೆ ಕರೆದುಕೊಂಡು ಹೋಗುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ವಿದ್ಯಾರ್ಥಿನಿಯೂ ತನ್ನ ಮನೆ ಸಮೀಪದಿಂದ ಈ ಬಸ್ಸು ಹತ್ತಿದ್ದೂ ಬಸ್ಸಿನಲ್ಲಿದ್ದ ಸೈಫುಲ್ಲಾ ವಿದ್ಯಾರ್ಥಿನಿಗೆ ಮೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಕೂಡಲೇ ಆಕ್ಷೇಪಿಸಿದ ವಿದ್ಯಾರ್ಥಿನಿ ಈ ಬಗ್ಗೆ ಬಸ್ಸಿನ ನಿರ್ವಾಹಕನಿಗೆ ದೂರು ನೀಡಿದ್ದು, ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದಾರೆ . ಸಂತ್ರಸ್ತ ವಿದ್ಯಾರ್ಥಿನಿ ಠಾಣೆಯಲ್ಲಿ ದೂರು ನೀಡುತ್ತಲೇ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಿರುಕುಳಕ್ಕೆ ಒಳಗಾದ ಸಂದರ್ಭ ಬಹಳಷ್ಟು ಮಹಿಳೆಯರು ಯುವತಿಯರು ದೂರು ನೀಡಲು ಬಾರದಿರುವ ಹಿನ್ನಲೆಯಲ್ಲಿ ಈ ರೀತಿಯ ಪ್ರಕರಣಗಳು ಪೊಲೀಸ್ ಇಲಾಖೆಯ ಗಮನಕ್ಕೆ ಬರುವುದಿಲ್ಲ. ಆದರೇ ಈ ಪ್ರಕರಣದಲ್ಲಿ ವಿದ್ಯಾರ್ಥಿ ಧೈರ್ಯ ಪ್ರದರ್ಶಿಸುವ ಮೂಲಕ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು