Sunday, January 19, 2025
ಸುದ್ದಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದ ಪುಣ್ಯದಿನ.

ದೆಹಲಿ : ದೇಶಕಂಡ ಅಪ್ರತಿಮ ದೇಶಭಕ್ತ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನಚಾರಣೆ. ಅಕ್ಟೋಬರ್ ಎರಡರಂದು ಜನಿಸಿದ ಅವರು ಕೇಂದ್ರಗೃಹಮಂತ್ರಿಗಳಾಗಿದ್ದರು.ಅವರ ನಿವಾಸ ದೆಹಲಿಯ ಜನಪಥದಲ್ಲಿತ್ತು.

ಒಂದು ಮಧ್ಯಾಹ್ನದ ಸಮಯ ರೈತಮಹಿಳೆಯರಿಬ್ಬರು ಹುಲ್ಲಿನ ಹೊರೆಯನ್ನು
ಹೊತ್ತು ಜನಪಥದತ್ತ ಬರುತ್ತಾರೆ.ಅದನ್ನು ನೋಡಿದ ರಕ್ಷಣಾಸಿಬ್ಬಂದಿ ಅವರನ್ನು
ತಡೆಯುತ್ತಾರೆ.ಇಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎನ್ನುತ್ತಾರೆ.ರೂಮಿನಲ್ಲಿ
ಕುಳಿತು ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಹೊರಬರುತ್ತಾರೆ.ಏನಾಯಿತೆಂದು
ಕೇಳುತ್ತಾರೆ.ರಕ್ಷಣಾಸಿಬ್ಬಂದಿ ಒಳಗೆ ಬರುತ್ತಿದ್ದ ಈ ಮಹಿಳೆಯರನ್ನು ತಡೆದೆವು
ಎನ್ನುತ್ತಾರೆ.ಶಾಸ್ತ್ರೀಜಿಯವರಿಗೆ ಕೋಪ ಬರುತ್ತದೆ..”ಅಲ್ರಯ್ಯಾ..ಪಾಪ
ಮಹಿಳೆಯರು,ಸುಡುಬಿಸಿಲು,ತಲೆಯ ಮೇಲೆ ಭಾರ.ಇಲ್ಲಿಂದ ಹೋದರೆ ಅವರ ಮನೆ
ಹತ್ತಿರವಾಗಬಹುದು.ಅದಕ್ಕೆ ಬಂದಿದ್ದಾರೆ.ಅವರನ್ನು ತಡೆಯಬೇಡಿ.ಹೋಗಲಿ
ಬಿಡಿ”ಎನ್ನುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು “ಜೈ ಜವಾನ್ ಜೈ ಕಿಸಾನ್” ಎಂದು ಘೋಷಣೆ ಮಾಡಿದ ಆದರ್ಶನಾಯಕನೊಬ್ಬ ನುಡಿದಂತೇ ನಡೆದ
ರೀತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜನರನ್ನು ಉದ್ಧಾರ ಮಾಡುತ್ತೇನೆಂದು ನೂರಡಿ ದೂರದಿಂದ ಹೇಳಿ,ಅಂಗರಕ್ಷಕರ
ಮಧ್ಯದಲ್ಲೇ ಓಡಾಡುವ ಅಡ್ನಾಡಿ ನೇತಾರರು ಇಂತಹ ಆದರ್ಶಗಳನ್ನು ಓದಿಕೊಳ್ಳಬೇಕು.

ಹೆಸರು : ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ
ಜನನ : ೨ ಅಕ್ಟೋಬರ್ ೧೯೦೪
ತಂದೆ : ಶ್ರೀ ಶಾರದಾ ಪ್ರಸಾದ್ ಶ್ರೀವಾಸ್ತವ
ತಾಯಿ : ಶ್ರೀಮತಿ ರಾಮದುಲಾರಿ ದೇವಿ
ಪತ್ನಿ : ಶ್ರೀಮತಿ ಲಲಿತಾ ಶಾಸ್ತ್ರೀ
ಶಾಸ್ತ್ರೀಜಿಯವರು ಪ್ರಧಾನಮಂತ್ರಿ,ಗೃಹಮಂತ್ರಿ ಹಾಗೂ ವಿದೇಶಾಂಗ ಮಂತ್ರಿಗಳಾಗಿ
ಕಾರ್ಯನಿರ್ವಹಿಸಿದ್ದಾರೆ.

Leave a Response