Sunday, November 24, 2024
ಮೂಡಬಿದಿರೆ

ಹಾವುಗಳು ಉಪದ್ರವಿಯಲ್ಲ, ಪರಿಸರ ಸ್ನೇಹಿಗಳು; ಅರಣ್ಯ ಸಹ ಸಂರಕ್ಷಣಾಧಿಕಾರಿ ಪ್ರಶಾಂತ್ -ಕಹಳೆ ನ್ಯೂಸ್

ಮೂಡಬಿದಿರೆ : ವಿಷಕಾರಿ ಹಾವುಗಳಿಂದ ಯಾವುದೇ ಅಪಾಯವಿಲ್ಲ. ಅವುಗಳು ತಮ್ಮ ಆತ್ಮ ರಕ್ಷಣೆಗಾಗಿ ಧಾಳಿ ಮಾಡುತ್ತಾವೆಯೇ ಹೊರತು ಯಾವುದೇ ಪೂರ್ವದ್ವೇಷಗಳಿಂದಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾವುಗಳ ಬಗ್ಗೆ ನಮಗಿರುವ ತಪ್ಪು ಮಾಹಿತಿಗಳನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಬೇಕು ಎಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಲ್ಲಬೆಟ್ಟು, ಮೂಡಬಿದಿರೆಯಲ್ಲಿ ನಡೆದ ಹಾವು-ನಾವು ಕಾರ್ಯಕ್ರಮದಲ್ಲಿ ಅರಣ್ಯ ಸಹ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ರವರು ಹೇಳಿದರು. ಸರಕಾರೇತರ ಸಂಸ್ಥೆಯ ಸದಸ್ಯರುಗಳಾದ ಉರಗ ತಜ್ಞ ವಿಪಿನ್ ರಾಯ್ ಹಾಗೂ ‘ಹಾವು-ನಾವು’ ಯೋಜನಾಧಿಕಾರಿ ಸ್ಪೂರ್ತಿ ಶೆಟ್ಟಿ ರವರು ವಿದ್ಯಾರ್ಥಿಗಳಿಗೆ ಹಾವುಗಳ ಧಾಳಿಯ ಕುರಿತು ಕೆಲವೊಂದು ವಿಡಿಯೋಗಳನ್ನು ಪ್ರದರ್ಶಿಸಿದರು. ಹಾವುಗಳ ಧಾಳಿಯನ್ನು ತಡೆಯಲು ಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಕಚ್ಚಿದ ನಂತರ ನಾವು ಮಾಡಬೇಕಾದ ಕರ್ತವ್ಯಗಳನ್ನು ಸ್ಥೂಲವಾಗಿ ವಿವರಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಿ, ವಿದ್ಯಾರ್ಥಿಗಳ ಸಂದೇಹಗಳಿಗೆ ಸೂಕ್ತ ಪರಿಹಾರ ನೀಡಿದರು. ವೇದಿಕೆಯಯಲ್ಲಿ ಅರಣ್ಯಧಿಕಾರಿಗಳಾದ ಮಂಜುನಾಥ ಗಾಣಿಗ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಶಿವಪ್ರಸಾದ್ ರವರು ಉಪಸ್ಥಿತರಿದ್ದರು. ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.