ಗುಜರಾತ್ : ಗುಜರಾತ್‍ನ ಅರಾವಲಿ ಜಿಲ್ಲೆಯಲ್ಲಿ ವಿವಾಹದಲ್ಲಿ ದಲಿತ ವರ ಸಾಂಪ್ರದಾಯಿಕ ಟೋಪಿ ಧರಿಸಿದಕ್ಕೆ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.
ಈ ಮೆರವಣಿಗೆಯ ಮೇಲೆ ಸವರ್ಣೀಯರು ಕಲ್ಲು ತೂರಾಟ ನಡೆಸಿದ್ದು, ಮೆರವಣಿಗೆಯಲ್ಲಿ ವರನ ಕೆಲವು ಸಂಬಂಧಿಕರು ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿದ್ದರು, ಈ ಕಾರಣದಿಂದಾಗಿ ಸವರ್ಣಿಯರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕಾರ, ಈವರೆಗೆ 9 ಜನರನ್ನು ಬಂಧಿಸಲಾಗಿದೆ. ಮದುವೆ ಮೆರವಣಿಗೆ ಆರಂಭದ ತಕ್ಷಣವೇ ಕಲ್ಲು ತೂರಾಟ ಪ್ರಾರಂಭವಾಯಿತು. ಪೊಲೀಸರ ಪ್ರಕಾರ, ಮೇಲ್ಜಾತಿಗೆ ಸೇರಿದ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮೆರವಣಿಗೆಯಲ್ಲಿ ದಲಿತ ಪುರುಷರು ಮತ್ತು ಮಹಿಳೆಯರು ‘ಸಫಾ’ (ಸಂಪ್ರದಾಯಿಕ ಉಡುಗೆ) ಧರಿಸುವುದನ್ನು ಆರೋಪಿಗಳು ಆಕ್ಷೇಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವರನ ಕುಟುಂಬದ ಸದಸ್ಯರು ಮತ್ತು ಇತರರನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರ ಕಡೆಯಿಂದ ಆರೋಪಿಸಲಾಗಿದ್ದು, ಮದುವೆಯ ಸಂದರ್ಭದಲ್ಲಿ ಡಿಜೆ ಸಂಗೀತ ಹಾಕದಂತೆ ಕೂಡ ಬೆದರಿಕೆ ಹಾಕಲಾಗಿದೆ.