Recent Posts

Monday, January 20, 2025
ಹೆಚ್ಚಿನ ಸುದ್ದಿ

ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿಬರ್ಂಧವನ್ನು ಕೇಂದ್ರ ತೆಗೆದುಹಾಕಿದೆ; ನಿರ್ಮಲಾ ಸೀತಾರಾಮನ್-ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವಹಿವಾಟಿನ ವ್ಯವಹಾರಗಳನ್ನು ನೀಡುವ ಮೇಲಿನ ನಿಬರ್ಂಧವನ್ನು ಕೇಂದ್ರ ತೆಗೆದುಹಾಕಿದೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಅವರು, ಖಾಸಗಿ ಬ್ಯಾಂಕುಗಳಿಗೆ ಸರ್ಕಾರಿ ವ್ಯವಹಾರವನ್ನು ನೀಡುವುದರ ಮೇಲಿದ್ದ ನಿಬರ್ಂಧವನ್ನು ತೆಗೆದುಹಾಕಲಾಗಿದ್ದು, ಎಲ್ಲಾ ಬ್ಯಾಂಕುಗಳು ಈಗ ಭಾಗವಹಿಸಬಹುದು ಎನ್ನುವುದು ಖಚಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ನಿರ್ಧಾರವು ಖಾಸಗಿ ಬ್ಯಾಂಕುಗಳನ್ನು ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರನ್ನಾಗಿ ಮಾಡುತ್ತದೆ ಎಂದು ಸಚಿವಾಲಯು ತಿಳಿಸಿದೆ. ಬುಧವಾರ ಸರ್ಕಾರ ತೆಗೆದುಕೊಂಡ ನಿರ್ಧಾರವು ಎಲ್ಲಾ ಖಾಸಗಿ ವಲಯದ ಬ್ಯಾಂಕುಗಳಿಗೆ ಈ ಕಾರ್ಯಾಚರಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವಾಲಯವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು