Saturday, November 23, 2024
ಪುತ್ತೂರು

ವಿವೇಕಾನಂದ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮ, ಪತ್ರಿಕೋದ್ಯಮದಲ್ಲಿ ವಿಪುಲವಾದ ಅವಕಾಶಗಳಿವೆ; ಗಂಗಾಧರ ಕಲ್ಲಪಳ್ಳಿ-ಕಹಳೆ ನ್ಯೂಸ್

ಪುತೂರು : ಪತ್ರಿಕೋದ್ಯಮ ಎನ್ನುವುದು ಸಾಗರವಿದ್ದಂತೆ. ಕಲಿಯಲು ತುಂಬಾ ವಿಷಯವಿದೆ. ಪತ್ರಕರ್ತ ಅಭ್ಯಾಸ ಮಾಡಿದಷ್ಟು ಪತ್ರಿಕೋದ್ಯಮದಲ್ಲಿ ಪಕ್ವತೆಯನ್ನು ಗಳಿಸಲು ಸಾಧ್ಯ. ಪತ್ರಿಕೋದ್ಯಮ ಪಲಾಪೇಕ್ಷೆ ಇಲ್ಲದೇ ಕಾರ್ಯ ಮಾಡುತ್ತಿತ್ತು. ತಂತ್ರಜ್ಞಾನ ಯುಗದಿಂದಾಗಿ ಪತ್ರಿಕೋದ್ಯಮದಲ್ಲಿ ಅಗಾಧ ಬದಲಾವಣೆಯಾಗಿದೆ ಎಂದು ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ಹೇಳೀದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ ಹಾಗು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಗುರುವಾರ ಅವರು ಮಾತನಾಡಿದರು. ಪತ್ರಿಕೋದ್ಯಮದಲ್ಲಿ ವಿಪುಲವಾದ ಅವಕಾಶಗಳಿವೆ. ವಿದ್ಯಾರ್ಥಿಗಳು ಬರಿಯುವ ಹವ್ಯಾಸವನ್ನು ಬೆಳಿಸಿಕೊಳ್ಳಬೇಕು, ಸುದ್ದಿ ಮಾತ್ರವಲ್ಲದೇ ಮಾನವ ಆಸಕ್ತಿ, ವಿಶೇಷ ಲೇಖನಗಳನ್ನು ಬರಿಯುವ ಅಭ್ಯಾಸವನ್ನು ಮಾಡಬೇಕು. ಪದಗಳ ತೂಕದ ಮೇಲೆ ಲೇಖನವನ್ನು ಗುರುತಿಸಲಾಗುತ್ತದೆ. ಪರಂಪರಾಗತ ಪತ್ರಿಕೋದ್ಯಮ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಡಿಜಿಟಲ್ ಮಾದ್ಯಮದ ಯುಗದಲ್ಲಿಯೂ ಪತ್ರಿಕೆಗಳು ಎದ್ದು ನಿಂತಿದೆ ಎಂದು ಅಭಿಪ್ರಾಯಪಟ್ಟರು. ಪತ್ರಿಕೆಗಳಲ್ಲಿ ಸಮಸ್ಯೆಗಳ ಕುರಿತಾಗಿ ವರದಿಗಳನ್ನು ಪ್ರಕಟ ಮಾಡುವುದರಿಂದ ಅನೇಕ ಸಮಸ್ಯೆಗಳು ಬಗೆಹರಿಯುತ್ತಿವೆ. ನವ ಮಾಧ್ಯಮಗಳಾದ ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯ್ಯೂಟ್ಯೂಬ್‍ಗಳನ್ನು ವಿದ್ಯಾರ್ಥಿಗಳು ಉತ್ತಮವಾಗಿ ಬಳಸಬೇಕು. ಪತ್ರಕರ್ತರು ಜನರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ಮೇಘ ಆರ್ ಸಾನಾಡಿ ಮಾತನಾಡಿ, ವಿದ್ಯಾರ್ಥಿಗಳು ಪತ್ರಕರ್ತರೊಂದಿಗೆ ಸ್ವತಂತ್ರವಾಗಿ ಮಾತನಾಡಲು ಅವಕಾಶ ಸಿಗಬೇಕೆಂದು ಪತ್ರಕರ್ತ ಮೇಷ್ಟ್ರು ಅನ್ನುವ ಉತ್ತಮ ಕಾರ್ಯಕ್ರಮವನ್ನು ವಿಭಾಗ ಆಯೋಜಿಸುತ್ತಿದೆ ಎಂದು ನುಡಿದರು. ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಕ್ಷತ್ ಭಟ್, ಉಪನ್ಯಾಸಕಿಯರಾದ ಪ್ರಜ್ಞಾ ಬಾರ್ಯ, ಸೀಮಾ ಪೋನಡ್ಕ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶೈಲಶ್ರೀ ಸ್ವಾಗತಿಸಿ, ವಿದ್ಯಾರ್ಥಿ ಹರ್ಷಿತ್ ವಂದಿಸಿದರು. ಅರ್ಪಿತಾ ನಿರೂಪಿಸಿದರು.