Monday, January 20, 2025
ಪುತ್ತೂರು

ಪ್ರತಿಭೆಗೆಳನ್ನು ಬೆಳೆಸಲು ವಿದ್ಯಾರ್ಥಿಗಳು ಸಂಘಗಳಲ್ಲಿ ತೊಡಗಿಸಿಕೊಳ್ಳಬೇಕು; ಹರೀಶ್ ಶಾಸ್ತ್ರಿ-ಕಹಳೆ ನ್ಯೂಸ್

ಪುತ್ತೂರು : ಕಾಲೇಜಿನಲ್ಲಿರುವ ಸಂಘಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಒಂದು ಮಾರ್ಗವಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಸಂಘಗಳಲ್ಲಿ ಸೇರಿಕೊಂಡು, ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅವರ ಶಕ್ತಿ, ಸೋಲು ಮತ್ತು ಪ್ರತಿಭೆಯ ಬಗ್ಗೆ ತಿಳಿಯುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರದ ಮುಖ್ಯಸ್ಥ ಹರೀಶ ಶಾಸ್ತ್ರಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಐಕ್ಯುಎಸಿ ಘಟಕ ಹಾಗೂ ವಿಜ್ಞಾನ ಸಂಘದ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘವನ್ನು ಉದ್ಘಾಟಿಸಿ, ಗುರುವಾರ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶಕ್ತಿ, ಸೋಲು, ಅವಕಾಶ ಮತ್ತು ಬರುವ ಸಂಕಷ್ಟದ ಬಗ್ಗೆ ಚಿಂತನೆ ಮಾಡಬೇಕು. ಇದರ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಅನುಭವಲ್ಲದೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಜೀವನವು ಸಾಧನೆಯ ಪಥದತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬ ಮಾತಿದೆ. ವಿದ್ಯಾರ್ಥಿಗಳು ಪುಸ್ತಕದ ಹುಳು ಆಗದೆ, ಕಾಲೇಜಿನಲ್ಲಿರುವ ಸಂಘಗಳಿಗೆ ಸೇರಿ, ತಮ್ಮಲ್ಲಿರುವ ಪ್ರತಿಭೆಯನ್ನು ವೃದ್ಧಿಸಬೇಕು. ಅಲ್ಲದೆ, ಸಂಸ್ಕøತಿ ಮತ್ತು ಮಾನವೀಯತೆಯನ್ನು ಮೈಗೊಡಿಸಿಕೊಂಡು, ಶ್ರದ್ಧೆಯಿಂದ ಕೆಲಸ ಮಾಡಿದರೆ ಉತ್ತಮ ಎಂದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಐಕ್ಯುಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ.ಎಸ್. ಮತ್ತು ವಿಜ್ಞಾನ ಘಟಕದ ವಿದ್ಯಾರ್ಥಿ ಅಧ್ಯಕ್ಷೆ ಶ್ರಾವ್ಯ ಬಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಾಯಿರೂಪ, ವೀಣಾ ಮತ್ತು ವಿದ್ಯಾಶ್ರೀ ಪ್ರಾರ್ಥಸಿದರು. ವಿದ್ಯಾರ್ಥಿನಿ ಹಿಮಾ ಸ್ವಾಗತಿಸಿ, ವಿಜ್ಞಾನ ಸಂಘದ ಸಂಯೋಜಕಿ ನಿಶಾ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಶೀತಲ್ ಎಮ್. ವಂದಿಸಿ, ಭಾಗ್ಯಲಕ್ಷ್ಮೀ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು.