Recent Posts

Monday, January 20, 2025
ಬೆಂಗಳೂರು

ಸಚಿವ ಸುಧಾಕರ್ ಆಪ್ತ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದ ಶಾಸಕ ರೇಣುಕಾಚಾರ್ಯ-ಕಹಳೆ ನ್ಯೂಸ್

ಬೆಂಗಳೂರು : ಹೊನ್ನಾಳಿ ಶಾಸಕ ರೇಣುಕಾಚಾರ್ಯ ದೂರವಾಣಿ ಮೂಲಕ ಆರೋಗ್ಯ ಸಚಿವ.ಡಾ. ಸುಧಾಕರ್ ಅವರು ತಮ್ಮ ಕ್ಚೇತ್ರದ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಅವರ ಆಪ್ತ ಕಾರ್ಯದರ್ಶಿಗೆ ಧಮಕಿ ಹಾಕಿದ್ದಾರೆಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಸಚಿವ ಸುಧಾಕರ್ ಅವರ ಆಪ್ತ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ರೇಣುಕಾಚಾರ್ಯ, ಹತ್ತಾರು ಬಾರಿ ಭೇಟಿ ಮಾಡಿದರು ನಿಮ್ಮ ಸಚಿವರು ಕೆಲಸ ಮಾಡುತ್ತಿಲ್ಲ. ಶುಕ್ರವಾರ ಮಧ್ಯಾಹ್ನದ ಒಳಗೆ ನನ್ನ ಕೆಲಸ ಆಗದಿದ್ದರೆ, ಇನ್ನೊಂದು ಮುಖ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವುದಾಗಿ ತಿಳಿದು ಬಂದಿದೆ. ಇನ್ನು ಶುಕ್ರವಾರ ಸಚಿವರಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಗಾಂಧಿ ಪ್ರತಿಮೆ ಎದುರು ಸಚಿವರ ವಿರುದ್ಧ ಧರಣಿಗೆ ರೇಣುಕಾಚಾರ್ಯ ಅವರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು