Wednesday, November 20, 2024
ಹೆಚ್ಚಿನ ಸುದ್ದಿ

ಸಕಲಕಲವಲ್ಲಭ, ರೇಡಿಯೋ ಸ್ಟಾರ್; ‘ಎನ್.ವ್ಹಿ ರಮೇಶ್’-ಕಹಳೆ ನ್ಯೂಸ್

ಸಾಧಕರ ಪರಿಚಯ :
ಬಣ್ಣ ಹಚ್ಚಿದರೆ ಅದ್ಭುತ ನಾಟಕಕಾರ, ವೇದಿಕೆ ಮೇಲೆ ನಿಂತರೆ ಮಾತುಗಾರ, ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರೆ ಲೋಕಜ್ಞಾನವನ್ನು ಧಾರೆ ಎರೆಯುವ ವಿಚಾರವಂತ. ಚಲನ ಚಿತ್ರ ಕ್ಷೇತ್ರ, ಸಂಗೀತ ಕ್ಷೇತ್ರದ ಜೊತೆ ಸಂಪರ್ಕ ಹೊಂದಿರುವ ಕಲಾವಿದ. ಮಕ್ಕಳಿಗೆ, ಮಹಿಳೆಯರಿಗೆ, ಹರಿಹರೆಯದ ಯುವಕ- ಯುವತಿಯರಿಗೆ ಸರಣಿ ಕಾರ್ಯಕ್ರಮಗಳನ್ನು ನಡೆಸಿದ ಕಾರ್ಯಕ್ರಮ ಸಂಯೋಜಕ, ದೂರದರ್ಶನ ಚಂದನದ, ಹಂಗಾಮಿ ಪ್ರಸಾರ ನಿರ್ವಾಹಕ, ಕವನ, ಲೇಖನಕಾರ, ಪ್ರಶಸ್ತಿಗಳ ಸರದಾರನೇ ‘ಎನ್.ವ್ಹಿ ರಮೇಶ್’.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರೇಡಿಯೋ, ಈ ಪದ ಈಗ ಕೇಳಲು ಸಿಗೊದೇ ಅಪರೂಪ. ಟಿ.ವಿ , ಮೊಬೈಲ್‍ಗಳ ನಡುವೆ ಈ ರೆಡಿಯೋ ಈಗ ಮೂಲೆ ಗುಂಪಾಗಿದೆ. ಮೊದಲೆಲ್ಲಾ ಪ್ರತೀ ಮನೆಯ ಗೋಡೆ ಮೇಲೆ ರೆಡಿಯೋ ಇರ್ತಾನೆ ಇತ್ತು. ಆದ್ರೆ ಈಗ ಈ ರೆಡಿಯೋಗಳನ್ನು ನಾವು ನೋಡ್ಬೇಕು ಅಂದ್ರೆ ಗುಜಿರಿ ಅಂಗಡಿಗಳಿಗೆ ಹೋಗ್ಬೇಕು. ಹಿಂದಿನ ಕಾಲದಲ್ಲಿ ಅದೇ ರೇಡಿಯೋ ಮೂಲಕ, ಅದೆಷ್ಟೋ ಜನ ಹಾಡು, ಕಥೆ, ನಾಟಕ, ಕ್ರಿಕೆಟ್ ಮ್ಯಾಚ್ ಕಾಮೆಂಟ್ರಿ, ಸಿನಿಮಾಗಳನ್ನು ಕೇಳ್ತಾ ಇದ್ರೂ. ಅದೆಷ್ಟೋ ಕಲಾವಿದರ ಪ್ರತಿಭೆಗೆ ರೆಡಿಯೋ ಒಂದು ವೇದಿಕೆಯನ್ನೇ ಕಲ್ಪಿಸಿಕೊಡುತ್ತಿತ್ತು. ಇದು, ಬದಲಾಗಿರುವ ಕಾಲ, ಅಲ್ಲೆಲ್ಲೋ ಮೂಲೆಯಲ್ಲಿ ಕೂತು ಮನರಂಜನೆ ನೀಡ್ತಾ ಇದ್ದ ರೇಡಿಯೋ ಈಗ ಯಾರಿಗೂ ಬೇಡ. ಆದ್ರೆ ಆ ಕಾಲದಲ್ಲಿ ರೆಡಿಯೋದಲ್ಲೇ ದುಡಿದು, ಅದ್ರಲ್ಲೇ ಜೀವನ ಸಾಗಿಸಿ, ವಿವಿಧ ಕಾರ್ಯಕ್ರಮಗಳ ಮೂಲಕ ಸ್ಟಾರ್ ಆಗಿರುವವರು ಈಗಲೂ ನಮ್ಮ ಸಮಾಜದಲ್ಲಿ ಇದ್ದಾರೆ. ಅಂತಹ ಸ್ಟಾರ್‌ಗಳ ಪಟ್ಟಿಯಲ್ಲಿರುವವರು ಮೈಸೂರಿನ ‘ಎನ್.ವ್ಹಿ ರಮೇಶ್’ ಕೂಡ ಒಬ್ಬರು.

‘ಎನ್.ವ್ಹಿ ರಮೇಶ್’ ಅವರು ಎನ್.ಎಸ್ ವಾಮನ್ ಹಾಗೂ ಗಿರಿಜಾ ಅವ್ರ ಸುಪುತ್ರ. ಬರೋಬ್ಬರಿ 36 ವರ್ಷ ರೇಡಿಯೋದಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿ ‘ರೇಡಿಯೋ ಸ್ಟಾರ್’ ಆದವರು. 70ರ ಹರೆಯದ ಉತ್ಸಾಹಿಸಿ ಯುವಕ ಇವರು. ಕಲಾವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಕನ್ನಡ ನಿಪುಣ. ಕಲಾ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದರಿಂದ ಕವಿಯಾಗಿದ್ರು, ಜೊತೆಗೆ, ಬಾನುಲಿ ಹಾಗೂ ರಂಗಭೂಮಿಗಳ ನಾಟಕಕಾರನಾಗಿ, ನಟನಾಗಿ, ನಿರ್ದೇಶಕನಾಗಿ, ಭಾಷಣಕಾರನಾಗಿ, ಮಾಧ್ಯಮ ಕಾರ್ಯಾಗಾರನಾಗಿ, ಸಂಯೋಜಕನಾಗಿ, ನಾಟಕ ರೂಪಕ ಆರೋಗ್ಯ ಪರಿಸರ ಹಾಗೂ ಶಿಕ್ಷಣ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಸೈ ಎನಿಸಿಕೊಂಡವರು. ಇವರು ಯಾವುದೇ ವಿಚಾರದ ಮಾಹಿತಿಗಳನ್ನು ನೀಡುವಾಗ ಅದನ್ನು ವಿಭಿನ್ನವಾಗಿ, ಮನರಂಜನೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದರು.

ಬಣ್ಣ ಹಚ್ಚಿದರೆ ಅದ್ಭುತ ನಾಟಕಕಾರ, ವೇದಿಕೆ ಮೇಲೆ ನಿಂತರೆ ಮಾತುಗಾರ, ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರೆ ಲೋಕಜ್ಞಾನವನ್ನು ಧಾರೆ ಎರೆಯುವ ವಿಚಾರವಂತ. ಚಲನ ಚಿತ್ರ ಕ್ಷೇತ್ರ, ಸಂಗೀತ ಕ್ಷೇತ್ರದ ಜೊತೆ ಸಂಪರ್ಕ ಹೊಂದಿರುವ ಕಲಾವಿದ. ಮಕ್ಕಳಿಗೆ, ಮಹಿಳೆಯರಿಗೆ, ಹರಿಹರೆಯದ ಯುವಕ- ಯುವತಿಯರಿಗೆ ಸರಣಿ ಕಾರ್ಯಕ್ರಮಗಳನ್ನು ನಡೆಸಿದ ಕಾರ್ಯಕ್ರಮ ಸಂಯೋಜಕ, ದೂರದರ್ಶನ ಚಂದನದ ಹಂಗಾಮಿ ಪ್ರಸಾರ ನಿರ್ವಾಹಕ, ಲೇಖನಕಾರ, ಸಾಲು ಸಾಲು ಪ್ರಶಸ್ತಿಗನ್ನು ಮುಡಿಗೇರಿಸಿಕೊಂಡ ಸರದಾರನೇ ‘ಎನ್.ವ್ಹಿ ರಮೇಶ್’. ಕಲಬುರ್ಗಿ, ಭದ್ರಾವತಿಯಲ್ಲಿ, ರಾಯಚೂರು, ವಿಜಾಪುರ, ಮಡಿಕೇರಿ ಆಕಾಶವಾಣಿಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಮೈಸೂರು ಆಕಾಶವಾಣಿಯಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಭಾರತೀಯ ಕುಟುಂಬ ಯೋಜನಾ ಸಂಘ ಎಂಬ ಸ್ವಯಂಸೇವಾ ಸಂಸ್ಥೆಯ ಧಾರವಾಡ ಹಾಗೂ ಬೆಂಗಳೂರು ಶಾಖೆಗಳಲ್ಲಿ ಕುಟುಂಬ ಯೋಜನಾ ಶಿಕ್ಷಣಾಧಿಕಾರಿಯಾಗಿ, ಕರ್ನಾಟಕ ರಾಜ್ಯ ಯುವಜನ ಸೇವಾ ಇಲಾಖೆಯ ತರಬೇತಿ ಇಲಾಖೆಯಲ್ಲಿ ಯುವತಿಯರು ಹಾಗೂ ಯುವಕರ ತರಬೇತಿಗಾರನಾಗಿ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಮಹಿಳಾ ಸ್ವ ಸಹಾಯ ಸಂಘಗಳು, ಮಹಿಳಾ ಸಾಮಖ್ಯ ಸಂಸ್ಥೆ, ವಿವಿಧ ಸ್ವಯಂಸೇವಾ ಸಂಘಗಳೊಂದಿಗೆ ಮಹಿಳಾ ಅಭಿವೃದ್ಧಿಯ ಬಗೆಗೆ ಉಪನ್ಯಾಸ ಕಾರ್ಯಾಗಾರ, ರೂಪಕ-ನಾಟಕ-ಹಾಡು, ರಚನೆ, ನಿರ್ದೇಶನ ಹಾಗೂ ಪ್ರಸ್ತುತಪಡಿಸುವಿಕೆಯಲ್ಲಿ ಅಪಾರ ಪ್ರಯತ್ನ ಮಾಡಿದ ಸಾಧಕ ಇವರು.


ಸಮಾಜಕ್ಕೆ ನಾನು ಏನಾದ್ರೂ ಸೇವೆ ನೀಡಬೇಕು ಎಂದು ಸದಾ ತುಡಿತವಿರುವ ಇವರು, ಲೈಂಗಿಕ ಶಿಕ್ಷಣ, ಏಡ್ಸ್, ಮಲೇರಿಯಾ, ಕುಷ್ಠರೋಗ, ತಂಬಾಕು ಚಟಗಳು, ಮಾದಕ ವ್ಯಸನ ಇವೆಲ್ಲವುಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಜನರಿಗೆ ನೀಡುತ್ತಿದ್ದರು. ಬಾಲಕಿಯರ ರಕ್ಷಣೆ, ಮಹಿಳೆಯರ ಹಕ್ಕುಗಳು, ಮಹಿಳಾ ದೌರ್ಜನ್ಯ ವಿರುದ್ಧದ ಕಾನೂನು, ಪ್ರೇಮವಿವಾಹ, ಆತ್ಮಹತ್ಯೆ, ವೇಶ್ಯೆಯರು-ದೇವದಾಸಿಯರು, ಹೆಚ್.ಐ.ವಿ ಸೋಂಕಿತರು ಇವರ ಸಮಸ್ಯೆಗಳ ಬಗ್ಗೆ, ಕಾನೂನು ನೆರವಿನ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ನೂರಾರು ಕಾರ್ಯಕ್ರಮಗಳನ್ನು ನಡೆಸಿ, ಸಮಾಜಕ್ಕೆ ಅತ್ಯುತ್ತಮ ಮಾಹಿತಿದಾರರಾಗಿದ್ದಾರೆ.

ಪುಟ್ಟ ವಯಸ್ಸಿನಿಂದ ಕಲಾಕ್ಷೇತ್ರದಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡ ಎನ್.ವ್ಹಿ ರಮೇಶ್ ಈಗ ದಿಲ್ಲಿಯ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಣ ಯೋಜನೆ ಅಡಿಯಲ್ಲಿ ರಾಜ್ಯಾದಾದ್ಯಂತ ಶಿಕ್ಷಕರಿಗೆ ತರಬೇತಿ ಕೊಡುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಪಳಗಿ ಸಕಲಕಲವಲ್ಲಭ ಎನಿಸಿದ್ದಾರೆ.