ತಮ್ಮನ ಆತ್ಮಹತ್ಯೆಯ ಸುದ್ದಿ ಕೇಳಿ ತಾನೂ ಆತ್ಮಹತ್ಯೆಗೆ ಶರಣಾದ ಅಣ್ಣ! ಇಬ್ಬರು ಪುತ್ರರನ್ನು ಕಳೆದುಕೊಂಡ ಪೋಷಕರು-ಕಹಳೆ ನ್ಯೂಸ್
ಮೈಸೂರು : ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ತಮ್ಮನ ಆತ್ಮಹತ್ಯೆಯ ಸುದ್ದಿ ಕೇಳಿ ಅಣ್ಣ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಇದೀಗ ಕುಟುಂಬಸ್ಥರು ಅಣ್ಣ-ತಮ್ಮಂದಿರನ್ನು ಅಕ್ಕ ಪಕ್ಕದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. 28 ವರ್ಷದ ವೆಂಕಟೇಶ್ ಮತ್ತು 26 ವರ್ಷದ ಹರೀಶ್ ಮೃತ ಸಹೋದರರಾಗಿದ್ದು, ರೈತ ಕುಟುಂಬವಾಗಿದ್ದರಿಂದ ಹರೀಶ್ ವಿಪರೀತ ವೇಗದಲ್ಲಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಚಿನ್ಮಯಿ ಗೌಡ ಹಾಗೂ ಅಣ್ಣ ವೆಂಕಟೇಶ್ ಕೂಡ ತಮ್ಮನಿಗೆ ಕರೆ ಮಾಡಿ ಬುದ್ಧಿ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಸಜಹ ಜಗಳವಾಗಿದ್ದು, ಅಣ್ಣ ನನಗೆ ಬೈದ ಎಂದು ನೊಂದ ಹರೀಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಅಣ್ಣ ವೆಂಕಟೇಶ್ ಗೆ ತಿಳಿದು ಬಂದಿದೆ. ಜೊತೆಗೆ ತಮ್ಮನ ಮೃತದೇಹದ ಫೋಟೋ ಕೂಡ ವಾಟ್ಸಾಪ್ ನಲ್ಲಿ ಬಂದಿದ್ದು, ಇದನ್ನು ನೋಡಿ ವೆಂಕಟೇಶ್ ತೀವ್ರವಾಗಿ ನೊಂದಿದ್ದು, ತಾನು ಬೈದಿದ್ದರಿಂದಾಗಿ ತಮ್ಮ ಸಾವಿಗೀಡಾದ ಎಂದು ತೀವ್ರವಾಗಿ ಕುಸಿದು ಹೋಗಿದ್ದಾರೆ. ತನ್ನ ತಮ್ಮನ ಮೃತದೇಹ ಮನೆಗೆ ಬರುವುದರೊಳಗೆ ಸರಗೂರು ರಸ್ತೆಯ ಕಡೆಗೆ ಹೋದ ಅಣ್ಣ ವೆಂಕಟೇಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳೆದು ನಿಂತಿರುವ ಇಬ್ಬರು ಪುತ್ರರನ್ನು ಕಳೆದುಕೊಂಡ ಪೋಷಕರು ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.ಪೋಷಕರ ಮೌನ ರೋನೆ ಯಾರಿಗೂ ಕೇಳಿಲ್ಲ.