ಬಂಟ್ವಾಳ : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ದೇವಸ್ಯ ಮೂಡೂರು ಗ್ರಾಮದ ಸೀತಾ ಅವರಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ಮಂಜೂರುಗೊಂಡ 25,772/- ರೂಪಾಯಿ ಮತ್ತು ಮಣಿನಾಲ್ಕೂರು ಗ್ರಾಮದ ಚಂದ್ರಹಾಸ ಅವರಿಗೆ ಮಂಜೂರುಗೊಂಡ 45,891/- ರೂಪಾಯಿ ಚೆಕ್ಕುಗಳನ್ನು ಗುರುವಾರ ತಮ್ಮ ಶಾಸಕರ ಕಛೇರಿಯಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಸರಪಾಡಿ ಪಂಚಾಯತ್ ಸದಸ್ಯರಾದ ರಾಮಕೃಷ್ಣ ಮಯ್ಯ, ಶರ್ಮಿತ್ ಜೈನ್, ಧರಣೇಂದ್ರ ಜೈನ್, ಕಾವಳಮೂಡೂರು ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.