Tuesday, November 19, 2024
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರ, ಕಾಳಿಬೆಟ್ಟದಲ್ಲಿ ಫೆಬ್ರವರಿ 25ಕ್ಕೆ ಆರಂಭಗೊಂಡ ವಾರ್ಷಿಕ ಜಾತ್ರಾ ಮಹೋತ್ಸವು ಫೆಬ್ರವರಿ 27ಕ್ಕೆ ಸಂಪನ್ನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆಬ್ರವರಿ 25 ಕ್ಕೆ ಪ್ರಾರ್ಥನೆ, ಗಣಹೋಮ, ಧ್ವಜಾರೋಹಣ,ನಾಗ ಸನ್ನಿಧಿಯಲ್ಲಿ ಸರ್ಪ ಸೂಕ್ತ ಹೋಮ, ಮಧ್ಯಾಹ್ನ ವಿಶೇಷ ಪೂಜೆ, ಅನ್ನಸಂತರ್ಪಣೆ, ರಾತ್ರಿ ಕಾಳಿಗುಡಿಯಲ್ಲಿ ಹೂವಿನ ಪೂಜೆ, ರಂಗಪೂಜೆ, ಅಷ್ಟಾವಧಾನ ಸೇವೆ ಹಾಗೂ ವಿಶೇಷ ಪೂಜೆ, ಅನ್ನಸಂತರ್ಪಣೆ ನೆರವೇರಿತು. ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ಗಾಯತ್ರಿ ಮಹಾತ್ಮೇ ಯಕ್ಷಗಾನ ಜರುಗಿತು.

ಮತ್ತು ಫೆಬ್ರವರಿ 26ಕ್ಕೆ ಕಾಳಿಗುಡಿಯಲ್ಲಿ ಚಂಡಿಕಾಹೋಮ ಮತ್ತು ಅದರ ಪೂರ್ಣಾಹುತಿ, ಯಾಗ ಶಾಲೆಯಲ್ಲಿ ವಿಶೇಷ ಹೋಮಾದಿ ಹವನಗಳು, ದೇವರ ಬಲಿ, ಮೂಲದುರ್ಗಾ ಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಇನ್ನು ರಾತ್ರಿ ಮೂಲದುರ್ಗಾ ಗುಡಿಯಲ್ಲಿ ಹೂವಿನ ಪೂಜೆ, ರಂಗಪೂಜೆ, ದೇವರ ಬಲಿ ಹಾಗೂ ವಸಂತ ಮಂಟಪದಲ್ಲಿ ಶ್ರೀ ದೇವಿಗೆ ಅಷ್ಟಾವಧಾನ ಸೇವೆ, ಅನ್ನಸಂತರ್ಪಣೆ ನಡೆಯಲಿದೆ.

ಹಾಗೆಯೇ ಫೆಬ್ರವರಿ 27ಕ್ಕೆ ಬೆಳಗ್ಗೆ ತುಲಾಭಾರ ಸೇವೆ, ದೇವರ ಬಲಿ, ಓಕುಳಿ, ದುರ್ಗಾ ಹೋಮ ಪೂರ್ಣಾಹುತಿ ಹಾಗೂ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆಯೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.