Tuesday, November 19, 2024
ಸುದ್ದಿ

ʼನೂತನ ಶಿಕ್ಷಣ ಪದ್ಧತಿ ಜಾಗತಿಕ ಶಿಕ್ಷಣಕ್ಕೆ ಭಾರತದ ಕೊಡುಗೆʼ, ಮಂಗಳೂರು ವಿಶ್ವ ವಿದ್ಯಾನಿಲಯಯಲ್ಲಿ ನಡೆದ ವೆಬಿನಾರ್ನಲ್ಲಿ ಡಾ. ಕರುಣಾಕರ್ ಕೋಟೆಗಾರ್ ಅಭಿಮತ-ಕಹಳೆ ನ್ಯೂಸ್

ಮಂಗಳೂರು : ಭಾರತೀಯರ ತತ್ವಗಳಲ್ಲಿ ತನ್ನ ಬೇರನ್ನು ಹೊಂದಿರುವ, ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಎಂಬಂತಹ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಪಡಿಸುವುದು ನಮ್ಮ ಮುಂದಿರುವ ಸವಾಲು, ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಮತ್ತು ಎಂಐಟಿ (ಮಣಿಪಾಲ) ಪ್ರಾಧ್ಯಾಪಕ ಡಾ. ಕರುಣಾಕರ್ ಕೋಟೆಗಾರ್ ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಶಿಕ್ಷಣ ಮಂಡಲ ಮತ್ತು ನೀತಿ ಆಯೋಗದ ಸಹಯೋಗದೊಂದಿಗೆ ಮಂಗಳೂರು ವಿಶ್ವ ವಿದ್ಯಾನಿಲಯ, ಮಂಗಳ ಗಂಗೋತ್ರಿಯ ಶ್ರೀನಿವಾಸಮಲ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಶಿಕ್ಷಣ ಪದ್ಧತಿಯ (ಎನ್‌ಇಪಿ) ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ- ಜಾಗೃತಿ, ದೃಷ್ಟಿಕೋನ, ಸವಾಲುಗಳು ಮತ್ತು ಪ್ರತಿಕ್ರಿಯೆ ಎಂಬ ವೆಬಿನಾರ್ನಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಈ ಶಿಕ್ಷಣ ಪದ್ಧತಿ ಜಾಗತಿಕ ಜ್ಞಾನಕ್ಕೆ ಭಾರತದ ಕೊಡುಗೆಯಾಗಿರಲಿದೆ, ಎಂದರು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಬ್ಬಾಗಿಲನ್ನು ಮಂಗಳೂರು ವಿಶ್ವವಿದ್ಯಾನಿಲಯ ತೆರೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ನೂತನ ಶಿಕ್ಷಣ ಪದ್ಧತಿಯ ಜಾರಿಯಲ್ಲಿ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು ಅತ್ಯಂತ ನಿರ್ಣಾಯಕ ಪಾತ್ರವಹಿಸಲಿದೆ, ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರೊ. ಎಂ. ಜಯಶಂಕರ್ ಸ್ವಾಗತ ಕೋರಿದರೆ, ಪ್ರೊ. ಪ್ರಶಾಂತ್ ನಾಯ್ಕ್ ಧನ್ಯವಾದ ಸಮರ್ಪಿಸಿದರು. ಸಮಾರೋಪ ಸಮಾರಂಭದಲ್ಲಿ ಸ್ವಸ್ತಿಕ ನ್ಯಾಷನಲ್ ಸ್ಕೂಲ್ನ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಮುಖ್ಯ ಅತಿಥಿಯಾಗಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಐಕ್ಯೂಎಸಿ ನಿರ್ದೇಶಕಿ ಪ್ರೊ. ಕಿಶೋರಿ ನಾಯಕ್ ಕೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರೆ, ಕುಲಸಚಿವ (ಆಡಳಿತ) ಕೆ ರಾಜು ಮೊಗವೀರ (ಕೆಎಎಸ್)ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರ ತಂಡಗಳ ನೇತೃತ್ವ ವಹಿಸಿದ್ದ ಟ್ರ್ಯಾಕ್ ಲೀಡರ್ಗಳು, ಎನ್ಇಪಿ ಕುರಿತು ತಮ್ಮೊಳಗಿನ ಚರ್ಚೆಯಲ್ಲಿ ದಾಖಲಾದ ಪ್ರಮುಖ ಅಂಶಗಳನ್ನು ಮಂಡಿಸಿದರು. ಸುಮಾರು 1000 ಪ್ರಧ್ಯಾಪಕರು ಈ ವೆಬಿನಾರ್ನಲ್ಲಿ ಭಾಗಿಯಾಗಿದ್ದರು.