ವೃತ್ತಿಪರ ಸಾಧನೆ ಮತ್ತು ಸೇವೆಗಳು ಸಮಾಜದಲ್ಲಿ ಘನತೆಯೊಂದಿಗೆ ಜೀವನದ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ; ಪ್ರಾಂಶುಪಾಲ ಕೆ.ಎಸ್ ಈರಣ್ಣ.-ಕಹಳೆ ನ್ಯೂಸ್
ಹೊಳವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಟಿ.ಎನ್ ರವಿಪ್ರಕಾಶ್‍ಗೆ ಡಾಕ್ಟರೇಟ್ ಪದವಿ ದೊರೆತ ಹಿನ್ನಲೆಯಲ್ಲಿ ಸನ್ಮಾನಿಸಿ ಮಾತನಾಡಿದ ಕಾಲೇಜಿನ ; ಪ್ರಾಂಶುಪಾಲ ಕೆ.ಎಸ್ ಈರಣ್ಣ ಅವರು, ಸಮಾಜದಲ್ಲಿ ಸಾಧನೆಗಳನ್ನು ವಿವಿಧ ರಂಗಗಳಲ್ಲು ಸಹ ಸಾಧಿಸಬಹುದು.
ಅದೇ ರೀತಿಯಾಗಿ ವೃತ್ತಿ ಬದುಕಿನಲ್ಲೂ ಸಹ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳನ್ನು ಮಾಡಬಹುದೆಂದು ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕಾದಿಂದ ಡಾಕ್ಟರ್ ಆಫ್ ಲೆಟರ್ ಗೆ ಹಾನರರಿ ಡಾಕ್ಟರೇಟ್ ಅವಾರ್ಡ್‍ನ್ನು ಪಡೆದಿರುವ ನಮ್ಮ ಕಾಲೇಜಿನ ಆಂಗ್ಲ ಮಾಧ್ಯಮದ ಉಪನ್ಯಾಸಕರಾದ ಟಿ.ಎನ್ ರವಿಪ್ರಕಾಶ್ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಹಾಗೂ ಇವರು ಮುಂಬೈನ ಟೀಚರ್ಸ್ ಅಸೋಷಿಯೇಷನ್‍ನಲ್ಲಿ ಬರೆದಂತಹ ವಿವಿಧ ವಿಷಯಗಳ ಪ್ರಭಂದಗಳ ಆಧಾರಗಳ ಮೇಲೆ ಈ ಗೌರವ ಪಡೆದಿರುವುದು ನಮ್ಮ ಕಾಲೇಜಿಗೆ ಹೆಮ್ಮೆಯನ್ನು ತಂದುಕೊಟ್ಟಿದೆ ಎಂದರು. ಹಾಗೆಯೇ ಮಾತನಾಡಿದ ಡಾಕ್ಟರೇಟ್ ಪದವಿ ಪಡೆದ ಡಾ. ರವಿಪ್ರಕಾಶ್ ಅವರು, ವೃತ್ತಿ ಜೀವನದೊಂದಿಗೆ ವಿವಿಧ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಸಾಮಾಜಿಕವಾಗಿ ವಿವಿಧ ಆಲೋಚನೆಗಳು ಮಾಡುತ್ತವೆ. ಇದರಿಂದ ನಾನು ಮುಂಬೈನಲ್ಲಿ ಆಂಗ್ಲ ಭಾಷೆಯಲ್ಲಿ ಬರೆದಂತಹ ಪ್ರಭಂದಗಳು ಈ ಗೌರವಕ್ಕೆ ಅಡಿಪಾಯವಾದವು. ಇದಕ್ಕೆ ಸಹಕಾರ ಕಾಲೇಜಿನ ಪ್ರಾಂಶುಪಾಲರುಗಳನೊಂಡು ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಹಾಗೂ ಹಿರಿಯ ಮಾರ್ಗದರ್ಶಕರು ಕಾರಣರಾಗಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಎಂ ರುದ್ರೇಶ್, ಉಪನ್ಯಾಸಕರಾದ ಯತೀಶ್, ಪ್ರಶಾಂತ್, ಶಿವಕುಮಾರ್, ರವಿಪ್ರಸಾದ್, ಶೀಲಾ, ಕೋಮಲ, ಶಶಿಕಲಾ ಮತ್ತು ಸಿಬ್ಬಂದಿಗಳಾದ ಕೆ.ವಿ ಶ್ರೀನಿವಾಸ್, ಲೋಕೇಶ್ ಇತರರು ಉಪಸ್ಥಿತರಿದ್ದರು.