ಪುತ್ತೂರು : ಕಠಿಣ ಶ್ರಮದ ಜೊತೆಗೆ ಚುರುಕುತನ, ಬುದ್ಧಿವಂತಿಕೆ ಎಂಬುದು ಯಶಸ್ಸಿನ ಮೆಟ್ಟಿಲುಗಳು. ಅಷ್ಟೇ ಅಲ್ಲದೆ ಎಲ್ಲಾ ವ್ಯಕ್ತಿತ್ವದ ಜನರು ಗೆಲುವು ಸಾಧಿಸಲು ಸಾಧ್ಯವಿಲ್ಲ. ಪ್ರತಿಯೊಂದು ಕಾರ್ಯ ಸಾಧನೆಗೂ ಗುರಿ ಎಂಬುದು ಪ್ರಮುಖ ಅಂಶವಾಗಿರುತ್ತದೆ. ಜೀವನದಲ್ಲಿ ಪರಿಪೂರ್ಣತೆ ಹೊಂದಲು ಕೇಳುವ ತಾಳ್ಮೆ, ಸಂವಹನ ಕೌಶಲ್ಯ, ಏಕಾಗ್ರತೆ, ಶ್ರಮ, ನಾಯಕತ್ವ ಗುಣ, ಇವೆಲ್ಲವೂ ಇರಬೇಕಾಗುತ್ತದೆ ಎಂದು ಪ್ರೊ| ವಂದನಾ ಶಂಕರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಘಟಕದ ವತಿಯಿಂದ ಆಯೋಜಿಸಲಾದ ‘ಆಟ್ರಿಬ್ಯೂಟ್ಸ್ ಮತ್ತು ಸ್ಕಿಲ್ಸ್ ಫಾರ್ ಸಕ್ಸಸ್’ ಎಂಬ ವಿಷಯದ ಕುರಿತಾದ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಂಗಳವಾರ ಮಾತನಾಡಿದರು. ಕೌಶಲ್ಯ ಎಂಬುದು ಧನಾತ್ಮಕವಾಗಿರಬೇಕು. ಸತತ ಪರಿಶ್ರಮದಿಂದ ಜೀವನದಲ್ಲಿ ಉತ್ತಮ ಗುರಿ ತಲುಪಲು ಸಾಧ್ಯ ವ್ಯಕ್ತಿ ಪರಿಪೂರ್ಣನಾಗಬೇಕಾದರೆ ಅವನಲ್ಲಿ ಶಿಸ್ತು ಬದ್ಧ ನಡವಳಿಕೆ ಮತ್ತು ಏಕಾಗ್ರತೆ ತುಂಬಾ ಅಗತ್ಯವಾಗಿರುತ್ತದೆ. ಮೌಲ್ಯಯುತ ಯೋಚನೆ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ| ವಿ.ಜಿ ಭಟ್ ಮಾತಾನಾಡಿ ಜೀವನದಲ್ಲಿ ಯಶಸ್ಸು ಗಳಿಸಲು ಚತುರ ಕೌಶಲ್ಯ ಅಗತ್ಯ. ವಿಭಿನ್ನ ಶೈಲಿಯ ಕಾರ್ಯವು ನಮ್ಮ ಗುರಿ ಮುಟ್ಟಲು ಪ್ರೇರೆಪಿಸುತ್ತದೆ. ಪ್ರತಿಯೊಬ್ಬರಿಗೂ ಕಲೆ ಇದ್ದೇ ಇರುತ್ತದೆ. ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಏಕಾಗ್ರತೆ ಮುಖ್ಯವಾಗಿರುತ್ತದೆ ಎಂದು ಹೇಳಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ| ವಿಜಯ ಸರಸ್ವತಿ ಪ್ರಸ್ಥಾವನೆಗೈದರು. ರಸಾಯನ ಶಾಸ್ತ್ರ ವಿಭಾಗದ ಸಂಯೋಜಕ ವಿಜಯ ಭಟ್‍ಗಣಪತಿ ಸ್ವಾಗತಿಸಿ, ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸೀಮಾ ಪೋನಡ್ಕ ವಂದಿಸಿದರು. ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ನಮೃತಾ ಕೆ. ಕಾರ್ಯಕ್ರಮ ನಿರೂಪಿಸಿದರು.