ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಪ್ರಕರಣ; ಯುವಕ ಸೈಬರ್ ಕ್ರೈಂ ಪೊಲೀಸರ ವಶಕ್ಕೆ-ಕಹಳೆ ನ್ಯೂಸ್
ಆಲಂಕಾರು : ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಾಟ್ಸಾಪ್ ನಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿದ ಆರೋಪದ ಮೇಲೆ ಬಡಗನ್ನೂರು ಕೊಯಿಲದ ಯುವಕನೋರ್ವನನ್ನು ವಶಕ್ಕೆ ಪಡೆದಿದ್ದಾರೆ.
ಕೂರ್ನಡ್ಕದ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್, ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಧ್ವನಿ ಸಂದೇಶ ರವಾನೆ ಮಾಡಿ ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಪೊಲೀಸರಿಗೆ ಇತ್ತೀಚೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಮೊಬೈಲ್ ನಂಬವೊರ್ಂದರಿಂದ ಅಲ್ಲಾಹು, ಪೈಗಂಬರ್, ಟಿಪ್ಪು ಹಾಗೂ ಮುಸ್ಲಿಂ ಹೆಣ್ಮಕ್ಕಳನ್ನು ನಿಂದಿಸಿ ಧರ್ಮ ನಿಂದನೆ, ಜಾತಿ ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಬಡಗನ್ನೂರು ಗ್ರಾಮದ ಕೊಯಿಲದ ಯುವಕನೋರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಪ್ರಾಪ್ತ ಎನ್ನಲಾಗಿದೆ.