Sunday, January 19, 2025
ವಾಣಿಜ್ಯ

‘ಚಿನ್ನೋತ್ಸವ’ದ ಜತೆಗೆ ‘ಕೃಷಿಕೋತ್ಸವ’ ವಿಶೇಷ ; ಮುಳಿಯ ಜುವೆಲ್ಸ್‌ನಲ್ಲಿ ಎ. 9ರಿಂದ ಮೇ 5ರ ವರೆಗೆ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಠಿತ ಸ್ವರ್ಣ ಮಳಿಗೆ ಮುಳಿಯ ಜುವೆಲ್ಸ್‌ನಲ್ಲಿ ಈ ಬಾರಿ ಚಿನ್ನೋತ್ಸವದ ಜತೆಗೆ ವಿಶಿಷ್ಟ ಪರಿಕಲ್ಪನೆಯ ಕೃಷಿಕೋತ್ಸವವನ್ನು ಎ. 9ರಿಂದ ಮೇ 5ರ ತನಕ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಚೇರ್‌ವೆುನ್‌ ಕೇಶವ ಪ್ರಸಾದ್‌ ಮುಳಿಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಕ್ಕೂ ಚಿನ್ನಕ್ಕೂ ಇರುವ ಸಂಬಂಧಕ್ಕೆ ಸುದೀರ್ಘ‌ ಪರಂಪರೆಯಿದೆ. ಅದನ್ನು ಗೌರವಿಸಿ ರೈತ ಸಮುದಾಯಕ್ಕೆ ಗೌರವಿಸುವ ಮುಳಿಯ ಕೃಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಬಾರಿಯ ಚಿನ್ನೋತ್ಸವ ನೆಲದ ಪ್ರಯೋಗಶೀಲ ಸಾಧಕ ಕೃಷಿಕರನ್ನು ಗೌರವಿಸುವ ಕೃಷಿಕೋತ್ಸವ ಆಗಲಿದೆ. ಕೊಡಗು, ಕರಾವಳಿ, ಮಲೆನಾಡುಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಮೌಲ್ಯವರ್ಧನೆ ಮಾಡಿದ, ಕೃಷಿಕರಿಗೆ ನೆರವಾಗುವ ಹೊಸ ಅನ್ವೇಷಣೆಗಳನ್ನು ಸಾಧಿಸಿದ ಹಿರಿಮೆಗಳನ್ನು ಗೌರವಿಸುವ ಸದುದ್ದೇಶದೊಂದಿಗೆ ರೈತರನ್ನು ಒಗ್ಗೂಡಿಸಿ ವಿಚಾರ ಸಂಕಿರಣ, ಸಂವಾದಗಳನ್ನು ಆಯೋಜಿಸಲಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನೆ :

ಎ. 9ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಕೃಷಿಕೋತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಲಯನೆಸ್‌ ಕ್ಲಬ್‌ ಅಧ್ಯಕ್ಷೆ ವಾಣಿಕೃಷ್ಣ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಕೃಷಿ ಉತ್ಪನ್ನ ಮಾರಾಟಗಾರ ಮುರಳಿ ಶ್ಯಾಮ್‌, ಸಂಸ್ಥೆಯ ಹಿರಿಯರಾದ ಮುಳಿಯ ಶ್ಯಾಮ್‌ ಭಟ್‌ ಮತ್ತು ಸುಲೋಚನ ಭಾಗವಹಿಸಲಿದ್ದಾರೆ. ಕೃಷಿ ಸಾಧಕರಾದ ಮಿತ್ತಮಜಲು ದೇವರಾಯ ಹಾಗೂ ದರ್ಣಪ್ಪ ಗೌಡ ಅವರನ್ನು ಸಮ್ಮಾನಿಸಲಿದ್ದು, ಕೃಷಿಕರಾದ ಮಿತ್ತಮಜಲು ಪರಮೇಶ್ವರ ಹಾಗೂ ಎ.ಪಿ. ಸದಾಶಿವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ರೈತಬಂಧು ಶಿವಶಂಕರ ನಾಯಕ್‌ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಚಿನ್ನೋತ್ಸವ ವಿಶೇಷ :

ವರ್ಷಂಪ್ರತಿ ಮುಳಿಯ ಚಿನ್ನೋತ್ಸವವನ್ನು ನಾಲ್ಕು ವಿಭಾಗಳಾಗಿಸಿ ಆಯೋಜಿಸಲಾಗುತ್ತಿದ್ದು, ಎ. 9ರಿಂದ 14ರ ತನಕ ಮದುವೆ ಆಭರಣಗಳ ಹಬ್ಬ ‘ಗಟ್ಟಿಮೇಳ’, ಎ. 15ರಿಂದ 21ರ ತನಕ ‘ಪುತ್ತೂರ ಮುತ್ತಿನ ಸ್ವರ್ಣಾಭರಣ ಹಬ್ಬ’, ಎ. 23ರಿಂದ 28ರ ತನಕ ‘ಮೆನ್ಸ್‌ ಕಲೆಕ್ಷನ್‌’ ಆಯೋಜಿಸಲಾಗಿದೆ.

ಅದೃಷ್ಟದ ಗ್ರಾಹಕರಿಗೆ ಉಡುಗೊರೆ

ಅದೃಷ್ಟದ ಗ್ರಾಹಕರಿಗೆ ಪ್ರತಿದಿನ ಲಕ್ಕಿ ಡ್ರಾ ಮೂಲಕ ಒಂದು ಚೀಲ ಸಾವಯವ ಗೊಬ್ಬರ ಅಥವಾ ತತ್ಸಮಾನ ಮೌಲ್ಯದ ಉಡುಗೊರೆ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ. ಇದರ ಜತೆಗೆ ಪ್ರಥಮ ವಾರದ ಅದೃಷ್ಟವಂತ ಗ್ರಾಹಕರಿಗೆ ಕೇರಳ ಪ್ರವಾಸ, ದ್ವಿತೀಯ ವಾರದ ಅದೃಷ್ಟವಂತ ಗ್ರಾಹಕರಿಗೆ ದೇವರ ಚಿನ್ನದ ಪ್ರತಿಮೆ, ತೃತೀಯ ವಾರದ ಅದೃಷ್ಟವಂತ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ ಗೆಲ್ಲುವ ಅವಕಾಶವಿದೆ. ತಿಂಗಳ ಅದೃಷ್ಟವಂತ ಗ್ರಾಹಕರಿಗೆ ಮೋಟೊ ಕಾರ್ಟ್‌, ಜಾಗ್ವರ್‌ ವೀಡ್‌ ಕಟ್ಟರ್‌, ಜಿ ಪವರ್‌ ಸ್ಪ್ರೇಯರ್ ಅಥವಾ ತತ್ಸಮಾನ ಮೌಲ್ಯದ ಚಿನ್ನಾಭರಣ ಗೆಲ್ಲುವ ಅವಕಾಶವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಳಿಯ ಸಂಸ್ಥೆ ಮ್ಯಾನೇಜಿಂಗ್‌ ಡೈರೆಕ್ಟರ್‌ ಕೃಷ್ಣನಾರಾಯಣ ಮುಳಿಯ, ಶೋರೂಂ ಮ್ಯಾನೇಜರ್‌ ನಾಮ ದೇವ್‌ ಮಲ್ಯ, ಸೀನಿಯರ್‌ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಸಂಜೀವ ಉಪಸ್ಥಿತರಿದ್ದರು.

ಕೃಷಿಕೋತ್ಸವ ವಿಶೇಷ

ಎ. 9 ಮತ್ತು 13ರಂದು ಸಂಜೆ ಭತ್ತ, ಗೇರು ಮತ್ತು ತರಕಾರಿ ಕೃಷಿಕರಿಗೆ ಸಮ್ಮಾನ ಹಾಗೂ ಈ ಕೃಷಿಗಳ ಕುರಿತು ತಜ್ಞ ಹಾಗೂ ಅನುಭವಸ್ಥರಿಂದ ಮಾಹಿತಿ, ಎ. 15 ಮತ್ತು 20ರಂದು ಸಂಜೆ ತೆಂಗು ಮತ್ತು ಬಾಳೆ ಕೃಷಿಕರಿಗೆ ಸಮ್ಮಾನ ಮತ್ತು ತಜ್ಞ ಹಾಗೂ ಅನುಭವಸ್ಥರಿಂದ ಮಾಹಿತಿ, ಎ. 23 ಮತ್ತು 27ರಂದು ಅಡಿಕೆ ಮತ್ತು ಕಾಳುಮೆಣಸು ಕೃಷಿಕರಿಗೆ ಸಮ್ಮಾನ ಮತ್ತು ತಜ್ಞ ಹಾಗೂ ಅನುಭವಸ್ಥರಿಂದ ಮಾಹಿತಿ, ಎ. 30 ಮತ್ತು 4ರಂದು ಹೈನುಗಾರಿಕೆ, ಜೇನು ಮತ್ತು ಕೋಕೋ ಕೃಷಿಕರಿಗೆ ಸಮ್ಮಾನ ಮತ್ತು ಈ ಕೃಷಿಗಳ ಕುರಿತು ತಜ್ಞ ಹಾಗೂ ಅನುಭವಸ್ಥರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ.