Monday, April 21, 2025
ಹೆಚ್ಚಿನ ಸುದ್ದಿ

ಜೆಸಿಐ ಆಲಂಕಾರಿನಲ್ಲಿ ಸೆಲ್ಯುಟ್‍ದ ಸೈಲೆಂಟ್ ವರ್ಕರ್ ಗೌರವ ಸಮರ್ಪಣೆ-ಕಹಳೆ ನ್ಯೂಸ್

ಜೆಸಿಐ ಆಲಂಕಾರಿನಲ್ಲಿ ಸೆಲ್ಯುಟ್‍ದ ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಂಗವಾಗಿ, ತೆರೆ ಮರೆಯಲ್ಲಿ ಅದ್ಭುತವಾಗಿ ಕೆಲಸ ಮಾಡುವ ಕರ್ಮಯೋಗಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಆಲಂಕಾರು ವಿಭಾಗದ ಮೆಸ್ಕಾಂ ಇಲಾಖೆಯ ಮೆಕ್ಯಾನಿಕ್ ಆದ ಮತ್ತು ಘಟಕದ ಸದಸ್ಯರಾದ ಮನೋಜ್‍ಕುಮಾರ್ ಎನ್ ಇವರನ್ನು ಇವರ ಸ್ವಗೃಹದಲ್ಲೇ ಗುರುತಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯತರಬೇತುದಾರ ಮತ್ತು ಜೆಸಿಐ ಆಲಂಕಾರು ಘಟಕದ ಪೂರ್ವಧ್ಯಕ್ಷ ಜೆಸಿ ಪ್ರದೀಪ್ ಬಾಕಿಲ, ಸಮಾಜದಲ್ಲಿರುವ ವ್ಯವಸ್ಥೆಗಳಾದ ಆಸ್ಪತ್ರೆ, ಶಾಲೆ, ವಿವಿಧ ಇಲಾಖೆಗಳು ಇಂದು ಕಾರ್ಯಚರಿಸಬೇಕಾದರೆ ವಿದ್ಯುತ್ ಇಲಾಖೆಯ ಸೇವೆ ಅತ್ಯಗತ್ಯ. ಮಳೆ ಇರಲಿ ಅಥವಾ ಬಿಸಿಲಿರಲಿ, ಯಾವುದೇ ಪರಿಸ್ಥಿತಿ ಇದ್ದರೂ ಈ ಇಲಾಖೆಯು ಸದಾ ಕ್ರಿಯಾಶೀಲವಾಗಿರುತ್ತದೆ. ಮನೋಜ್ ಅವರೂ ಯಾವಾಗಲೂ ನಗುಮೊಗದ ಸೇವೆಯನ್ನು ನೀಡುತ್ತಾ ಸಾರ್ವಜನಿಕರ ಸಮಸ್ಯೆಗಳನ್ನು ಕ್ಷಿಪ್ರವಾಗಿ ಪರಿಹರಿಸುತ್ತಾರೆ. ಅವರು ಈ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿಯನ್ನು ಸಾಧಿಸಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಗಣೇಶ್ ಕಟ್ಟಪುಣಿ, ವಲಯ ಉಪಾಧ್ಯಕ್ಷರಾದ ಹೇಮಲತಾ ಪ್ರದೀಪ್ ಬಾಕಿಲ, ಸ್ಥಾಪಕಾಧ್ಯಕ್ಷ ಬಿ.ಎಲ್. ಜನಾರ್ದನ, ಪೂರ್ವಾಧ್ಯಕ್ಷರಾದ ಪ್ರದೀಪ್‍ರೈ ಮನವಳಿಕೆ, ಗುರುಕಿರಣ್ ಶೆಟ್ಟಿ, ಪೂರ್ವ ವಲಯಉಪಾಧ್ಯಕ್ಷ ಪ್ರಶಾಂತ್‍ಕುಮಾರ್‍ರೈ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಚೇತನ್ ಎಂ ವಂದಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ