Recent Posts

Sunday, November 17, 2024
ಹೆಚ್ಚಿನ ಸುದ್ದಿ

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-ಕಹಳೆ ನ್ಯೂಸ್

ಫೆಬ್ರವರಿ 27 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಭಾರತೀಯ ಭೌತಶಾಸ್ತ್ರಜ್ಞ ಸರ್ ಸಿ ವಿ ರಾಮನ್ ರವರು ಆವಿಷ್ಕರಿಸಿದ ರಾಮನ್ ಪ್ರಭಾವದ ದಿನವನ್ನು ಗುರುತಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ”ಯನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಅತಿಥಿಗಳಿಂದ ವೈಜ್ಞಾನಿಕ ಮಹತ್ವವಿರುವ ತುಳಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು. “ವಿಶೇಷವಾದ ಜ್ಞಾನ ಹೊಂದಿರುವುದೇ ವಿಜ್ಞಾನ” ಎಂದು ಶ್ರೀರಾಮ ಪದವಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಸುಬ್ರಹ್ಮಣ್ಯ ಭಟ್ ವಿಜ್ಞಾನದ ಬಗ್ಗೆ ವಿವರಿಸುತ್ತಾ ಹೇಳಿದರು.

ಅತಿಥಿಗಳಿಗೆ ಗಿಡ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಪ್ರಯೋಗಗಳನ್ನು ಪ್ರದರ್ಶಿಸಿದರು. 7ನೇ ತರಗತಿಯ ಹಂಸ ಹಾಗೂ ಸಾನ್ವಿ ಪರಿಸರ ಗೀತೆ ಹಾಡಿದರು. ವಿಜ್ಞಾನ ದಿನಾಚರಣೆಯ ಮಹತ್ವವನ್ನು 7ನೇ ತರಗತಿಯ ವಿಶ್ವೇಶ ವಿವರಿಸಿದನು.

ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಪಟ್ಟಂತಹ ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿ, ಚರ್ಚಾ ಸ್ಪರ್ಧೆ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿದ್ದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಅಧ್ಯಾಪಕರಾದ ರಾಜೇಶ್ವರಿ ಬಹುಮಾನ ವಾಚಿಸಿದರು. ನಂತರ ಏಳನೇ ತರಗತಿಯ ವಿದ್ಯಾರ್ಥಿಗಳು ಕೊರೋನ ಕುರಿತಾದ ಕಿರು ಪ್ರಹಸನ ಮಾಡಿದರು.

ನಂತರ ಅತಿಥಿಗಳು, ವಿದ್ಯಾರ್ಥಿಗಳೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ತಾವು ತಯಾರಿಸಿದ ಮಾದರಿಗಳ ವಿವರಣೆಯನ್ನು ನೀಡಿದರು.

ವೇದಿಕೆಯಲ್ಲಿ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿನ ಅಧ್ಯಕ್ಷರು ಹಾಗೂ ಕುಂಡಡ್ಕ ಹಾಲು ಉತ್ಪಾದಕರ ಸೇವಾ ಸಂಘದ ನಿರ್ದೇಶಕರಾದ ಜಯಪ್ರಕಾಶ್ ನಾಯಕ್ ಎನ್ , ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಲತಾ ಪಟ್ಲ , ಯುವ ಕೇಸರಿ ಚಂದಳಿಕೆ ಇದರ ಪ್ರಧಾನ ಕಾರ್ಯದರ್ಶಿಯಾದ ಯೋಗೀಶ ಕೆ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ, ಶ್ರೀರಾಮ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮಿ ರಘುರಾಜ್ , ಶ್ರೀರಾಮ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ನಂದ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಗಗನ್ ಸ್ವಾಗತಿಸಿ, ಭಾರ್ಗವರಾಮ ನಿರೂಪಿಸಿ, ಅದಿತಿ ಧನ್ಯವಾದ ಸಮರ್ಪಿಸಿದರು.