ಸುರತ್ಕಲ್ : ಸುರತ್ಕಲ್ ಇಲ್ಲಿನ ಗುಡ್ಡೆಕೊಪ್ಪ ಬೀಚ್ ನಲ್ಲಿ ಆಟವಾಡಲೆಂದು ಇಳಿದ ಶಿವಮೊಗ್ಗ ಮೂಲದ 13 ವರ್ಷದ ಬಾಲಕ ಸಮುದ್ರ ಪಾಲಾದ ಘಟನೆ ನಡೆದಿದೆ.
ಮೃತ ಬಾಲಕನನ್ನು 13 ವರ್ಷದ ಮುಬಾರಕ್ ಎಂದು ಗುರುತಿಸಲಾಗಿದ್ದು, ತಂದೆ, ತಾಯಿ ಜೊತೆ ಗುಡ್ಡೆಕೊಪ್ಲ ಬೀಚ್ ಗೆ ಬಂದಿದ್ದನು. ನೀರಿನಲ್ಲಿ ಆಟವಾಡಲೆಂದು ತಂದೆ ಮತ್ತು ಮಗ ಇಳಿದಿದ್ದು, ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಂದೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಬಾಲಕನ ಪತ್ತೆಗಾಗಿ ಸ್ಥಳೀಯರು ಹಾಗೂ ಸಿಎಸ್ ಪಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.