ಇಂದು ಪ್ರಗತಿ ಸ್ಟಡಿ ಸೆಂಟರ್ ಪುತ್ತೂರಿನಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ-ಕಹಳೆ ನ್ಯೂಸ್
ಪುತ್ತೂರು : ಇಂದು ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ ಅದ್ವಿಕಾ ಡಿಜಿಟಲ್ ಸೇವಾ ಕೆಂದ್ರದ ಸಿಬ್ಬಂದಿಯಾದ ಕುಮಾರಿ ಐಶ್ವರ್ಯ ಬಿ ಡಿಜಿಟಲ್ ಸಾಕ್ಷರತಾ ಪ್ರಶಿಕ್ಷಣ ( ಟ್ರೈನಿಂಗ್ ಆನ್ ಡಿಜಿಟಲ್ ಲಿಟರಸಿ ) ಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (PMGDISHA) ನಡೆಯಿತು.
ಭಾರತ ದೇಶದ ವ್ಯವಹಾರ ವನ್ನು ಸಂಪೂರ್ಣ ವಾಗಿ ಡಿಜಿಟಲೀಕರಣ ಮಾಡುವ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಯವರ ಕನಸಿನಂತೆ ಈ ಅಭಿಯಾನವು ನಡೆಯುತ್ತಿದೆ. ಪ್ರಗತಿಸ್ಟಡಿ ಸೆಂಟರ್ ನಲ್ಲಿ ಸುಮಾರು 200 ವಿದ್ಯಾರ್ಥಿ ಗಳನ್ನು ಈ ಕೋರ್ಸ್ ಗೆ ಉಚಿತವಾಗಿ ನೋಂದಾವಣೆ ಮಾಡಿಕೊಳ್ಳಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾಗೋಕುಲ್ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತಾ ಪ್ರಶಿಕ್ಷಣ ದ ಅನುಕೂಲ ವನ್ನು ಪಡೆದು ಕೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.