Sunday, January 19, 2025
ಸುದ್ದಿ

ಮಂಗಳೂರು ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ; ಇಬ್ಬರು ಆರೋಪಿಗಳ ಬಂಧನ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಪೊಲೀಸರು, ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಬೆಂಗಳೂರು ಉತ್ತರಹಳ್ಳಿಯ ನಿವಾಸಿ ನೊಂದ ಮಹಿಳೆಯನ್ನು ರಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ 10ನೇ ತೋಕೂರು ನಿವಾಸಿ 42 ವರ್ಷದ ಹರೀಶ್ ಮತ್ತು ಬಂಟ್ವಾಳ ತಾಲೂಕಿನ ಮೂಡನಡಗೋಡು ದಡ್ಡಲ್ ಕಾಡ್ ನಿವಾಸಿ, ಮತ್ತು ಸುರತ್ಕಲ್ ಇಡ್ತಾ ಬಳಿಯ ಜಾರ್ಡಿನ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ 42 ವರ್ಷದ ಲೋಕನಾಥ್ ಪೂಜಾರಿ ಯಾನೆ ನವೀನ್ ಬಂಧಿತರು. ಈ ಆರೋಪಿಗಳು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದ ಬಿಎಎಸ್ ಎಫ್ ಫ್ಯಾಕ್ಟರಿಯ ಎದುರುಗಡೆ ಇರುವ ಫೆರಾವೊ ಕಾಂಪ್ಲೆಕ್ಸ್ ನಲ್ಲಿರುವ ಫೆರಾವೋ ಲಾಡ್ಡಿಂಗ್ & ಬೋಡಿರ್ಂಗ್‍ನ ರೂಮ್ ನಂ-205ರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು