Saturday, November 16, 2024
ಪುತ್ತೂರು

ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ರಕ್ಷಕ – ಶಿಕ್ಷಕ ಸಂಘದ ಸಭೆ-ಕಹಳೆ ನ್ಯೂಸ್

ಪುತ್ತೂರು : ‘ಹೃದಯವಂತಿಕೆ, ವಿಚಾರಶಕ್ತಿ, ಕಾರ್ಯತತ್ಪರತೆ ಇರುವ ವ್ಯಕ್ತಿ ಸಮಾಜದ ಶಕ್ತಿ’ ಇಂತಹ ಶಕ್ತಿಯುತ ವ್ಯಕ್ತಿಯನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಅಂಬಿಕಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದು ಶ್ಲಾಘನೀಯ ವಿಚಾರ. ಭಾರತೀಯ ಸಂಸ್ಕೃತಿಯನ್ನೊಳಗೊಂಡಂತೆ ಉನ್ನತ ಮಟ್ಟದ ಶಿಕ್ಷಣ ಅಂಬಿಕಾದಲ್ಲಿ ದೊರೆಯುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆಡಳಿತ ಮಂಡಳಿ, ಪ್ರಾಚರ್ಯರು, ಉಪನ್ಯಾಸಕರನ್ನೆಲ್ಲಾ ಅಭಿನಂದಿಸುತ್ತೇನೆ. ಪೋಷಕರೆಲ್ಲಾ ಮನೆಯಲ್ಲೂ ತಮ್ಮ ಮಕ್ಕಳಿಗೆ ಇಂತಹುದೇ ವಾತಾವರಣವನ್ನು ನಿರ್ಮಿಸಿ ಆಗ ಮಕ್ಕಳು ಎಂದಿಗೂ ಹಾದಿ ತಪ್ಪುವುದಿಲ್ಲ ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿ ನಡೆದ ಪೋಷಕರ ಸಭೆಯಲ್ಲಿ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಕವಿತಾ ಅಡೂರು ಅವರು ಅಂಬಿಕಾ ವಿದ್ಯಾ ಸಂಸ್ಥೆಯ ಬಗ್ಗೆ ಅಭಿಮಾನದ ನುಡಿಗಳನ್ನಾಡಿದರು. ಕಠಿಣ ಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಭಾರತೀಯರು ಹೆಚ್ಚು ಶ್ರಮ ನಿರತರು. ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನಕ್ಕಾಗಿ ಡೆಕ್ಕನ್ ಹೆರಾಲ್ಡ್ ,ಹಿಂದೂ ಮುಂತಾದ ಪತ್ರಿಕೆಗಳನ್ನೋದಲಿ. ದೂರ ದರ್ಶನದಿಂದ ಆದಷ್ಟು ದೂರವಿರಲಿ. ಪೋಷಕರು ಮನೆಯಲ್ಲಿ ತಮ್ಮ ಮಕ್ಕಳ ಎದುರು ನಕಾರಾತ್ಮಕ ವಿಚಾರ ಮಾತನಾಡಬಾರದು ಎಂದು ಅನುಭವಿ ವಿಶ್ರಾಂತ ಶಿಕ್ಷಕ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ನಿರ್ದೇಶಕರೂ ಆದ ಶ್ರೀ ಸುರೇಶ ಶೆಟ್ಟಿ ಅವರು ಪೋಷಕರಿಗೆ ಕಿವಿ ಮಾತುಗಳನ್ನು ಹೇಳಿದರು. ಭಾರತೀಯ ಸಂಸೄತಿಯನ್ನು ಒಳಗೊಂಡ ಅಂಬಿಕಾ ವಿದ್ಯಾಲಯ ಶೈಕ್ಷಣಿಕ ಫಲಿತಾಂಶದಲ್ಲೂ ಮುಂದಿದೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತಮ ಫಲಿತಾಂಶದೊಂದಿಗೆ ಸಾಧನೆಗೈದಿದೆ. ಶಿಕ್ಷಣದಲ್ಲಿ ಯೋಗವನ್ನು ಒಗ್ಗೂಡಿಸಿದೆ. ವಿಜ್ಞಾನ ಪದವಿ ಶಿಕ್ಷಣದ ಜತೆಗೆ ತತ್ತ್ವಶಾಸ್ತ್ರವನ್ನೊಳಗೊಂಡಂತಹ ಪ್ರಥಮ ಸಂಸ್ಥೆ ಅಂಬಿಕಾ. ದೇಶವನ್ನು ರಕ್ಷಿಸುತ್ತಿರುವ ಸೈನಿಕರಿಗಾಗಿ ಹಾಗೂ ಹುತಾತ್ಮ ಯೋಧರಿಗಾಗಿ ನಿರಂತರ ಜ್ಯೋತಿ ಪ್ರಜ್ವಲಿಸುವ ಅಮರ ಜವಾನ ಜ್ಯೋತಿಯ ನಿರ್ಮಾಣ . ಸಿ.ಬಿ.ಎಸ್.ಇ ಮಾನ್ಯತೆ ಪಡೆದ ಅಂಬಿಕಾ ವಿದ್ಯಾಲಯದ ಸಾಧನೆ ಇವೆಲ್ಲಾ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸಂಸ್ಥೆಯ ಸಾಧನೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಅಂಬಿಕಾ ಸಮೂಹ ಸಂಸ್ಥೆಯ ‘ಸಂಚಾಲಕ ಸುಬ್ರಮಣ್ಯ ನಟ್ಟೋಜರು ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು. ತಮ್ಮ ಮಕ್ಕಳ ಹಿತ ದೃಷ್ಠಿಯಿಂದ ಪೋಷಕರು ಸಭೆಯಲ್ಲಿ ಭಾಗವಹಿಸುವುದು ಮಾತ್ರವಲ್ಲ ಸಾದ್ಯವಾದಾಗ ವಿದ್ಯಾಲಯಕ್ಕೆ ಬರುತ್ತಿರಬೇಕು ಎಂದರು. ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಜಿ ಹಾಗೂ ಸಂಸ್ಥೆಯ ಪ್ರಾಚಾರ್ಯೆ ರಾಜಶ್ರೀ ಎಸ್ ನಟ್ಟೋಜ ಅವರು ಉಪನ್ಯಾಸಕರನ್ನು ಪೋಷಕರಿಗೆ ಪರಿಚಯಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ, ವಿದ್ಯಾಲಯದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪೋಷಕರು ಸಲಹೆ ಸೂಚನೆಗಳನ್ನು ನೀಡಿದರು. ಪೋಷಕರ ಪ್ರಶ್ನೆಗಳಿಗೆ ಪ್ರಾಚಾರ್ಯರು ಸಮರ್ಪಕವಾಗಿ ಉತ್ತರಿಸಿದರು. ಉಪನ್ಯಾಸಕರೆಲ್ಲಾ ಸಭೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.